ಸರಕಾರಿ ಪ್ರೌಢಶಾಲೆ ಅಜ್ಜಾವರ ಇಲ್ಲಿಯ ಮಕ್ಕಳು ಫುಟ್ ಬಾಲ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ- ವಿಭಾಗ ಮಟ್ಟಕ್ಕೆ ಆಯ್ಕೆ

0

ಸರಕಾರಿ ಪ್ರೌಢಶಾಲೆ ಅಜ್ಜಾವರ ಇಲ್ಲಿಯ ಮಕ್ಕಳು ಸುಳ್ಯದ 17ರ ವಯೋಮಾನದ ಬಾಲಕರ/ ಬಾಲಕಿಯರ ಮತ್ತು 14ರ ವಯೋಮಾನದ ಬಾಲಕಿಯರ – ಒಟ್ಟು 3 ತಂಡಗಳು ಸೆ. 22ರಂದು ಶಿಕ್ಷಣ ಇಲಾಖೆ ವತಿಯಿಂದ ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿ, ಸೀನಿಯರ್ ಬಾಲಕಿಯರ ತಂಡವು ಸೆಮಿ ಫೈನಲ್ ಗೆ ಆಯ್ಕೆಯಾಗಿದ್ದು, ಸೀನಿಯರ್ ಬಾಲಕರ ತಂಡವು ಫೈನಲ್ ನಲ್ಲಿ (ಮಂಗಳೂರು ದಕ್ಷಿಣ v/s ಸುಳ್ಯ) ದ್ವಿತೀಯ ಸ್ಥಾನ ಗಳಿಸಿ, ತಂಡದ 7 ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ .

ಸ.ಪ್ರೌ.ಶಾ.ಅಜ್ಜಾವರ ತಂಡದಿಂದ ಬಿ. ಎಚ್. ಇಬ್ರಾಹಿಂ, ಮುಹಮ್ಮದ್ ಸಫುವಾನ್ , ಸಿ.ಎಂ. ಅಹಮದ್ ಮಿದ್ಲಾಜ್ , ಅಹಮದ್ ರಝ, ಮಹಮ್ಮದ್ , ಮುಹಮ್ಮದ್ ಅಕ್ಮಲ್, ಮಹಮ್ಮದ್ ಹಾಝೀಮ್ ಈ ವಿದ್ಯಾರ್ಥಿಗಳು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.