ವೈದೇಹಿ ಯುವತಿ ಮಂಡಲ ಕಲ್ಮಡ್ಕ ಇದರ ಆಶ್ರಯದಲ್ಲಿ 10ನೇ ವರ್ಷದ ಶಾರದೋತ್ಸವ ಸೆ. 28ರಂದು ಶ್ರೀರಾಮ ಮಂದಿರದಲ್ಲಿ ನಡೆಯಲಿದೆ.









ಬೆಳಿಗ್ಗೆ 8 ಗಂಟೆಯಿಂದ ಶಾರದಾ ದೇವಿಯ ಪ್ರತಿಷ್ಠಾಪನೆ, ಗಣಪತಿ ಹೋಮ, ಭಜನೆ, ಅಕ್ಷರಾಭ್ಯಾಸ, ವಾಹನ ಪೂಜೆ ನಡೆಯಲಿದೆ.
ಮಧ್ಯಾಹ್ನ 11 ಗಂಟೆಯಿಂದ ಕಲ್ಮಡ್ಕ ಶ್ರೀರಾಮ ಸೇವಾ ಟ್ರಸ್ಟ್ನ ಅಧ್ಯಕ್ಷ ರಮೇಶ್ ಭಟ್ ತಿಪ್ಪನಕಜೆಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಆರೋಗ್ಯ ತಜ್ಞೆ ಡಾ. ವೀಣಾಪಾಲಚಂದ್ರ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಚಂದ್ರಾವತಿ, ಸ್ವಾವಲಂಬಿ ಉದ್ಯೋಗಿಗಳಾದ ಶ್ರೀಮತಿ ಸೀತಾಲಕ್ಷ್ಮೀ ಭಟ್, ಶ್ರೀಮತಿ ಪುಷ್ಪಾವತಿಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಖೋಖೋ ಪಂದ್ಯಾಟದಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಕು. ಅನ್ವಿತಾರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ವಿಶೇಷ ಆಕರ್ಷಣೆಯೊಂದಿಗೆ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ ನಡೆಯಲಿದೆ. ಸಂಜೆ 4.30ರಿಂದ ಶ್ರೀ ಮಹಾವಿಷ್ಣು ಸಿಂಗಾರಿಮೇಳ ಬಾಳಿಲ-ಮುಪ್ಪೇರ್ಯ ತಂಡದ ಸದಸ್ಯರಿಂದ ಯಕ್ಷಗಾನ ಬಯಲಾಟ ಗಜೇಂದ್ರ ಮೋಕ್ಷ ನಡೆಯಲಿದೆ.










