ಕಿಕ್ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಸುಳ್ಯದ ದುಶ್ಯಂತ್ ಸೇರಿದಂತೆ ಐ.ಕೆ.ಎಂ.ಎ. ದಕ್ಷಿಣ ಕನ್ನಡದ ವಿದ್ಯಾರ್ಥಿಗಳಿಂದ ರಾಷ್ಟ್ರ ಮಟ್ಟದ ಪದಕ ಸಾಧನೆ

0

ಹಿಮಾಚಲ ಪ್ರದೇಶದ ಸೋಲನ್ ನಗರದಲ್ಲಿ ಸೆ. 22 ರಿಂದ 26 ರ ವರೆಗೆ ನಡೆದ ರಾಷ್ಟ್ರ ಮಟ್ಟದ ಜೂನಿಯರ್ ಕಿಕ್ ಬಾಕ್ಸಿಂಗ್ ಕ್ರೀಡಾಕೂಟ 2025 ರಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ದಕ್ಷಿಣ ಕನ್ನಡದ ಸ್ಪರ್ಧಾಳುಗಳಾದ ಪೂರ್ವಿ ಕೆ.ಶೆಟ್ಟಿ, ಪ್ರೇರಣ್, ದುಶ್ಯಂತ್ ಎಸ್., ಪ್ರೀತ್ ಕುಲಾಲ್, ಧೃತಿಶ್ರೀ, ತನ್ವಿಶಾ, ಗಗನಾ, ರಿಧನ್ಯ ಮತ್ತು ಧೃತಿಕಾ ಇವರುಗಳು ಒಟ್ಟು 5 ಚಿನ್ನ, 2 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಪಡೆಯುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಜಿಲ್ಲೆಯ ಪಾರಮ್ಯ ಮೆರೆದಿದ್ದಾರೆ.

ಈ ಕ್ರೀಡಾಳುಗಳು ಸಂಸ್ಥೆಯ ತರಬೇತುದಾರರಾದ ಸೆನ್ಸಾಯಿ ನಿತಿನ್ ಸುವರ್ಣ ಮತ್ತು ಸೆನ್ಸಾಯಿ ಸಂಪತ್ ಕುಮಾರ್ ರಿಂದ ತರಬೇತಿ ಪಡೆಯುತ್ತಿದ್ದಾರೆ.

ದುಶ್ಯಂತ್ ಎಸ್. ಧಾರ್ಮಿಕ ದತ್ತಿ ಇಲಾಖೆಯಲ್ಲಿ ಪ್ರಥಮ ದರ್ಜೆ ಪರಿವೀಕ್ಷಕರಾಗಿರುವ ಸುಳ್ಯ ಹರಿಹರಪಲ್ಲತಡ್ಕದ ಶ್ರೀಧರ್ ಎಸ್.ಪಿ. – ಪವಿತ್ರಾಕ್ಷಿ ದಂಪತಿಯ ಪುತ್ರ. ಮಂಗಳೂರು ಪಣಂಬೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯದ 11 ನೇ ತರಗತಿ ವಿದ್ಯಾರ್ಥಿ.