ದುಗ್ಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಶ್ರೀದುರ್ಗಾಪೂಜೆ ಮತ್ತು ಆಯುಧ ಪೂಜೆ

0

ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ದುರ್ಗಾಪೂಜೆ, ಆಯುಧಪೂಜೆ ಮತ್ತು ತೆನೆಹಬ್ಬ ಇಂದು (ಸೆ.30) ನಡೆಯಿತು.


ಬೆಳಿಗ್ಗೆ ದುರ್ಗಾಪೂಜೆ ಆರಂಭಗೊಂಡು, ಬಳಿಕ ಆಯುಧಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು.
ಪುರೋಹಿತ ರಾಧಾಕೃಷ್ಣ ಭಟ್ ಜೋಗಿಯಡ್ಕ ಮತ್ತು ಬಳಗ ವೈದಿಕ ಕಾರ್ಯ ನೆರವೇರಿಸಿದರು.


ಈ‌ ಸಂದರ್ಭದಲ್ಲಿ ದೈವಸ್ಥಾನದ ಅನುವಂಶಿಕ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ, ಅಧ್ಯಕ್ಷರಾದ ಕಜೆ ಕುಶಾಲಪ್ಪ ಗೌಡ, ಗೌರವಾಧ್ಯಕ್ಷರಾದ ಸುಂದರ ರಾವ್, ಮಾಜಿ ಅಧ್ಯಕ್ಷರಾದ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ ಶೇಖರ ಕುದ್ಪಾಜೆ, ಆಡಳಿತ ಸಮಿತಿ, ಮಹಿಳಾ ಸೇವಾ ಸಮಿತಿ, ಯುವಸೇವಾ ಸಮಿತಿಯ ಸದಸ್ಯರು, ಊರ ಭಕ್ತಾದಿಗಳು ಉಪಸ್ಥಿತರಿದ್ದರು.