ಸುಳ್ಯದ ವಿಶ್ವ ಕಾಂಪ್ಲೆಕ್ಸ್ ನಲ್ಲಿ ಫ್ರೆಂಡ್ಸ್ ಮೆನ್ಸ್ ವರ್ಲ್ಡ್ ಶುಭಾರಂಭ

0

ಸುಳ್ಯ ಜಟ್ಟಿಪಳ್ಳದ ವಿಶ್ವ ಕಾಂಪ್ಲೆಕ್ಸ್ ನಲ್ಲಿ ಮಹೇಶ್. ಎ ರವರ ಮಾಲಕತ್ವದ ಫ್ರೆಂಡ್ಸ್ ಮೆನ್ಸ್ ವರ್ಲ್ಡ್ ಎಂಬ ಪುರುಷರ ಸಿದ್ಧ ಉಡುಪುಗಳ ಮಳಿಗೆಯು ಸೆ. 29 ರಂದು ಶುಭಾರಂಭಗೊಂಡಿತು.

ಸುಳ್ಯದ ಜವುಳಿ ಉದ್ಯಮಿ ಲಯನ್ ಎಂ.ಬಿ ಸದಾಶಿವ ರವರು ದೀಪ ಪ್ರಜ್ವಲಿಸಿ ಸಂಸ್ಥೆಯನ್ನು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ನಿವೃತ್ತ ವೈದ್ಯೆ ಡಾ. ಸಾಯಿಗೀತಾ ಜ್ಞಾನೇಶ್, ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶೀಲಾ ಅರುಣ್ ಕುರುಂಜಿ, ದೀಕ್ಷಾ ಟ್ರೇಡರ್ಸ್ ಮಾಲಕ ಮಾದವ ರಾವ್, ಕಾಂಪ್ಲೆಕ್ಸ್ ಮಾಲಕ ಸಂದೇಶ ಕುರುಂಜಿ, ಮಾಲಕರ ತಂದೆ ಜಯರಾಮ ಗೌಡ, ತಾಯಿ ಶ್ರೀಮತಿ ಭುವನೇಶ್ವರಿ, ಬಂಧುಗಳಾದ ರಾಮಣ್ಣಗೌಡ, ಶ್ರೀಮತಿ ಸಾವಿತ್ರಿ ಅಯ್ಯಣ್ಣ ಗೌಡ
ಉಪಸ್ಥಿತರಿದ್ದರು.
ಕು. ಯಶ್ವಿತಾ ಸ್ವಾಗತಿಸಿದರು. ದೇವರಾಜ್ ಕುದ್ಪಾಜೆ ಕಾರ್ಯಕ್ರಮ ನಿರೂಪಿಸಿದರು.
ಯುವಕರಿಗೆ ಹೊಸ ವಿನ್ಯಾಸದ ಟ್ರೆಂಡಿಂಗ್ ಫ್ಯಾಶನ್ ಸಿದ್ಧ ಉಡುಪುಗಳು ಕೈ ಗೆಟುಕುವ ದರದಲ್ಲಿ ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.