ಸುಳ್ಯದ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ಭಾರೀ ರಿಯಾಯಿತಿ…!

0

ಸುಳ್ಯದ ಮುಖ್ಯ ರಸ್ತೆ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್ ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನಾಭರಣ ಖರೀದಿಗೆ ಗ್ರಾಹಕರಿಗೆ ಭಾರೀ ರಿಯಾಯಿತಿ ನೀಡಲಾಗಿದೆ.


ಚಿನ್ನಾಭರಣಗಳ ಪ್ರತೀ ಪವನಿನ ಮೇಲೆ ರೂ. 1,600 ರಿಯಾಯಿತಿ ಹಾಗೂ
ಚಿನ್ನದ ಆಭರಣಗಳ ಮಜೂರಿ ಮೇಲೆ ಶೇ.100 ರಿಯಾಯಿತಿ ನೀಡಲಾಗಿದ್ದು ಈ ರಿಯಾಯಿತಿ ಸೆ.22 ರಿಂದ ಪ್ರಾರಂಭಗೊಂಡಿದ್ದು ಅ.31 ರವರೆಗೆ ನಡೆಯಲಿದೆ.
ಮಳಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ 1 ಕೆ.ಜಿ 40 ಗ್ರಾಂ.ನ ಚಿನ್ನದ ಸರ ಪ್ರದರ್ಶನಕ್ಕಿಡಲಾಗಿದೆ.
ಸುಳ್ಯದ ಹೃದಯಭಾಗದಲ್ಲಿರುವ ಮಳಿಗೆಯಲ್ಲಿ ಚಿನ್ನಾಭರಣ ಪ್ರಿಯರಿಗೆ ಹೊಸತನದ ಖರೀದಿಗೆ ವ್ಯವಸ್ಥೆ ಮಾಡಲಾಗಿದೆ.


ವಿಶೇಷ ಆಫರ್ ಮತ್ತು ರಿಯಾಯಿತಿಗಳ ಮೂಲಕ ವೈಶಿಷ್ಟ್ಯಮಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿಗಳು ಉತ್ತಮ ಸೇವೆ ನೀಡುತ್ತಿರುವುದರಿಂದ ಅಪಾರ ಸಂಖ್ಯೆಯಲ್ಲಿ ಗ್ರಾಹಕರು ಚಿನ್ನಾಭರಣ ಖರೀದಿಸುತ್ತಿದ್ದು ಸಂಸ್ಥೆಯಲ್ಲಿ ಗ್ರಾಹಕರು ತುಂಬಿದ್ದರು.
ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಜ್ರದ ಉಂಗುರ ಮತ್ತು ವಜ್ರದ ಓಲೆಗಳ ವಿಶೇಷ ಸಂಗ್ರಹವಿದೆ.


ವಿಶಾಲವಾದ ಮಳಿಗೆಯಲ್ಲಿ ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ ವ್ಯವಸ್ಥೆ ಮಾಡಲಾಗಿದ್ದು ಪ್ರತೀ ದಿನ ಮಳಿಗೆಯಲ್ಲಿ ಮುಗಿಬಿದ್ದು ಚಿನ್ನಾಭರಣ ಖರೀದಿಸುತ್ತಿರುವುದು ಕಂಡು ಬಂತು.
ಗ್ರಾಹಕರಿಗೆ ಮಳಿಗೆಯ ಹಿಂಬದಿಯಲ್ಲಿ ವಾಹನ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದ್ದು
ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.