ಹರಿಹರ ಪಲ್ಲತ್ತಡ್ಕ :ಉಚಿತ ನೇತ್ರ ಚಿಕಿತ್ಸಾ ಶಿಬಿರ

0

ಜಿಲ್ಲಾ ಅಂದತ್ವ ನಿವಾರಣಾ ಸಂಸ್ಥೆ ಮಂಗಳೂರು, ಅಶ್ವಿನಿ ಒಪ್ಟಿಕಲ್ಸ್ ಮತ್ತು ಕ್ಲಿನಿಕ್, ಯೋಗ ಕ್ಷೇಮ ಸಂಕೀರ್ಣ ಕಡಬ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಸಚಿನ್ ಕ್ರೀಡಾ ಸಂಘ ಹರಿಹರ ಪಲ್ಲತ್ತಡ್ಕ, ಗ್ರಾಮ ಪಂಚಾಯತ್ ಹರಿಹರ ಪಲ್ಲತ್ತಡ್ಕ, ಮತ್ತು ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತ್ತಡ್ಕ ಇವರ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಅ.12 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಕಲಾ ಮಂದಿರದಲ್ಲಿ ಉದ್ಘಾಟನೆ ಗೊಂಡಿತು.

ವೇದಿಕೆಯಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ಜಯಪ್ರಕಾಶ್, ಕಾರ್ಯದರ್ಶಿಯಾದ ಭವಾನಿ ಶಂಕರ್ ಪೈಲಾಜೆ, ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅದ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೊಡು, ಹರಿಹರ ಪಲ್ಲತ್ತಡ್ಕಗ್ರಾ. ಪಂ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ, ಸಚಿನ್ ಕ್ರೀಡಾ ಸಂಘದ ಅಧ್ಯಕ್ಷರಾದ ಮನೀಶ್ ಪಲ್ಲತ್ತಡ್ಕ, ವೈದ್ಯರುಗಳಾದ ಶಾಂತರಾಜ್, ವಿಕಾಸ್,ಕಾರ್ತಿಕ್, ಸವಿತ ಉಪಸ್ಥಿತರಿದ್ದರು.
ಭವಾನಿ ಶಂಕರ ಪೈಲಾಜೆ ಧನ್ಯವಾದಗೈದರು
ಗೋಪಾಲ್ ಎಣ್ಣೆಮಜಲು ಕಾರ್ಯಕ್ರಮ ನಿರೂಪಿಸಿದರು.

ವರದಿ: ಕುಶಾಲಪ್ಪ ಕಾಂತುಕುಮೇರಿ