








ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು, ಅ.11ರಂದು ನಿಧನರಾದ ಪದ್ಮಯ್ಯ ಗೌಡ ಮಂಜಿಕಾನ ಇವರ ಮರಣ ಸಾಂತ್ವನ ನಿಧಿ ರೂ.11000/- ವನ್ನು ಪುತ್ರರಾದ ಬೆಳ್ಳಿಯಪ್ಪ, ದಿನೇಶ ರವರಿಗೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ವಿತರಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಗಂಗಾಧರ್ ಪಿ.ಎಸ್, ಸುರೇಶ್ ಎಂ.ಎಚ್, ಹರಿಪ್ರಸಾದ್ ಪಾನತ್ತಿಲ, ಮತ್ತು ವೀರಪ್ಪ ಗೌಡ ಮಂಜಿಕಾನ, ಆದಿತ್ಯ ಮದುವೆಗದ್ದೆ ಮತ್ತಿತರರು ಉಪಸ್ಥಿತರಿದ್ದರು.










