ಆಲೆಟ್ಟಿ ಗ್ರಾಮದ ಗುಡ್ಡೆಮನೆ ದಿ. ಯಶೋಧರ ಗೌಡ ರವರ ಪತ್ನಿ ಶ್ರೀಮತಿ ನೇತ್ರಾವತಿ ಗುಡ್ಡೆಮನೆ ಯವರು ಅ. 1 ರಂದು ನಿಧನರಾಗಿದ್ದು ಮೃತರ ಉತ್ತರ ಕ್ರಿಯಾಧಿ ಸದ್ಗತಿ ಕಾರ್ಯಕ್ರಮ ಗುಡ್ಡೆಮನೆ ಮನೆಯಲ್ಲಿ ಅ. 12 ರಂದು ನಡೆಯಿತು.









ಮೃತರ ಕುರಿತು ನ್ಯಾಯವಾದಿ ದಿನೇಶ್ ಮಡಪ್ಪಾಡಿ ನುಡಿ ನಮನ ಸಲ್ಲಿಸಿದರು. ಉದ್ಯಮಿ ದಾಮೋದರ ಗೌಡ ನಾರ್ಕೋಡು ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ
ಮೃತರು ಪುತ್ರ ಚೇತನ್ ಗುಡ್ಡೆಮನೆ, ಪುತ್ರಿಯರಾದ ಅರೆಭಾಷೆ ಅಕಾಡೆಮಿ ಸದಸ್ಯೆ ಶ್ರೀಮತಿ ಲತಾ ಪ್ರಸಾದ್ ಕುದ್ಪಾಜೆ,
ಶ್ರೀಮತಿ ರೋಹಿಣಿ, ಶ್ರೀಮತಿ ಶೋಭಾ, ಸೊಸೆ ಶ್ರೀಮತಿ ರೇಖಾ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.










