ಸುಳ್ಯದ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಅ.13ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.









ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಒಎಲ್ಇ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸೀನಿಯರ್ ಅಡ್ವೊಕೇಟ್ ಮತ್ತು ಫಾರ್ಮರ್ ಅಡಿಷನಲ್ ಅಡ್ವೊಕೇಟ್ ಜನರಲ್, ಕರ್ನಾಟಕ ಹಾಗೂ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಕೌನ್ಸಿಲ್ ಮೆಂಬರ್ ಡಾ. ಅರುಣ್ ಶ್ಯಾಮ್ ಎಂ ಉದ್ಘಾಟಿಸಿ, ಶುಭ ಹಾರೈಸಿದರು.

ವೇದಿಕೆಯಲ್ಲಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಟೀನಾ ಹೆಚ್.ಎಸ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಕಲಾವತಿ ಎಂ, ವಿದ್ಯಾರ್ಥಿ ಸಂಘದ ನಾಯಕ ನಾಚಪ್ಪ ಸಿ.ಎನ್, ಉಪನಾಯಕ ನಿಹಾಲ್ ಎಮ್. ಡಿ., ಕಾರ್ಯದರ್ಶಿ ವಿಜಯ್ ಕೆ, ಕ್ರೀಡಾಕಾರ್ಯದರ್ಶಿ ಉಮ್ಮರ್ ಮುಕ್ತಾರ್, ಜತೆ ಕಾರ್ಯದರ್ಶಿ ಅನಘ. ಕೆ.ಪಿ, ಕ್ರೀಡಾ ಜತೆ ಕಾರ್ಯದರ್ಶಿ ವಿದ್ಯಾಶ್ರೀ ರೈ, ಸಾಂಸ್ಕೃತಿಕ ಕಾರ್ಯದರ್ಶಿ ಸಚಿನ್ ರೈ, ಸಾಂಸ್ಕೃತಿ ಕ ಜತೆ ಕಾರ್ಯದರ್ಶಿ ವನ್ಯಶ್ರೀ ಕೆ.ಎಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳಿಗೆ ಬ್ಯಾಡ್ಜ್ ಪ್ರದಾನ ಮಾಡಲಾಯಿತು. ವಿದ್ಯಾರ್ಥಿನಿಯರಾದ ಹಂಸಿನಿ ಹಾಗೂ ಪೂರ್ಣಿಮಾ ಸ್ವಾಗತ ನೃತ್ಯ ಮಾಡಿದರು. ವಿದ್ಯಾರ್ಥಿನಿಯರಾದ ರಮ್ಯಾ, ಚಂದನ ಹಾಗೂ ಶ್ರೇಯ ಪ್ರಾರ್ಥಿಸಿದರು. ಪ್ರೊ. ಕಲಾವತಿ ಎಂ ಪ್ರತಿಜ್ಞಾ ವಿಧಿ ಬೋಧಿಸಿದರು. ಉಷಾ ಸಿ. ಶೆಟ್ಟಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಪ್ರೊ. ಕೃತಿಕಾ ಜೆ ವಂದಿಸಿದರು. ಕಚೇರಿ ಮೇಲ್ವಿಚಾರಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

ಈ ಸಂಧರ್ಭದಲ್ಲಿ
ಎ.ಓ.ಎಲ್.ಇ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕಾರ್ಯದರ್ಶಿ ಹಾಗೂ
ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಹೇಮನಾಥ್ ಕೆ.ವಿ, ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಕೆ.ವಿ ದಾಮೋದರ ಗೌಡ, ಕೆವಿಜಿ ಆಯುರ್ವೇದ
ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ ಸೇರಿದಂತೆ ಕಾನೂನು ವಿದ್ಯಾರ್ಥಿಗಳು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿವಿಧ ವಿದ್ಯಾಸಂಸ್ಥೆಗಳ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










