ಅಲೆಕ್ಕಾಡಿಯಿಂದ ಎಡಮಂಗಲಕ್ಕೆ ಹೋಗುವ 5 ಕಿ.ಮೀ. ಲೋಕೋಪಯೋಗಿ ರಸ್ತೆ ತೀರಾ ಹದಗೆಟ್ಟಿದ್ದು ಎಡಮಂಗಲ ರೈಲ್ವೆ ಗೇಟಿನ ತನಕ ಸಂಚಾರ ದುಸ್ತರವಾಗಿದೆ. ಈ ರಸ್ತೆಯಲ್ಲಿ ಸಂಚರಿಸಲು ಜನಗಳು ಮಾತ್ರವಲ್ಲ – ದನಗಳು ಸಹ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇದೆ. ಜನ ಸಾಮಾನ್ಯರು ನಡೆಯಲು ಅಯೋಗ್ಯವಾಗಿದೆ. ರೈಲು ಹಿಡಿಯಲೆಂದು ಎಡಮಂಗಲಕ್ಕೆ ಹೊರಟವರು ಈ ರಸ್ತೆಯ ದೆಸೆಯಿಂದಾಗಿ ನಿಧಾನಗೊಂಡು ಎಡಮಂಗಲ ತಲಪುವಾಗ ಸಮಯ ಮೀರುತ್ತದೆ. ಅಲ್ಲಿ ಹೋಗುವಾಗ ಗೇಟ್ ಹಾಕಲಾಗುತ್ತದೆ.










ಅಲೆಕ್ಕಾಡಿಯಿಂದ ಪುಳಿಕುಕ್ಕು ತಲಪಬೇಕಾದರೆ ಹರಸಾಹಸ ಪಡಬೇಕಾಗುತ್ತದೆ. ರಸ್ತೆಯ ಹೊಂಡ ಗುಂಡಿ ಮುಚ್ಚುವ ಬದಲು ಹೊಸ ರಸ್ತೆ ನಿರ್ಮಿಸಿದರೆ ಮಾತ್ರ ಆ ಭಾಗದ ಜನರ ಬವಣೆ ತೀರಬಹುದು. ಸಂಬಂಧ ಪಟ್ಟ ಇಲಾಖೆ ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಯವರು ಸಂಕಲ್ಪ ಮಾಡಿದರೆ ಮಾತ್ರ ರಸ್ತೆ ಹೊಸದಾಗಿ ಡಾಮರೀಕರಣಗೊಂಡು, ಸಂಚಾರ ಸುಗಮವಾಗಬಹುದು ಎಂದು ರಸ್ತೆ ಫಲಾನುಭವಿಗಳು ಹೇಳತೊಡಗಿದ್ದಾರೆ.










