ನೂತನ ಎ.ಟಿ.ಎಂ. ಉದ್ಘಾಟನೆ, ಗಣ್ಯರ ಉಪಸ್ಥಿತಿ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಗುತ್ತಿಗಾರು ಶಾಖೆಯು ಅ. 13 ರಂದು ಸ್ಥಳಾಂತರಗೊಂಡು ಗುತ್ತಿಗಾರು ಪೇಟೆಯ ರಾಘವೇಂದ್ರ ಕಾಂಪ್ಲೆಕ್ಸ್’ನ ಪ್ರಥಮ ಮಹಡಿಯಲ್ಲಿ ಶುಭಾರಂಭ ಗೊಂಡಿತು. ಕೆಳ ಮಹಡಿಯಲ್ಲಿ ಡಿಸಿಸಿ ಬ್ಯಾಂಕ್ ನ ಎ.ಟಿ.ಎಂ ಗೂ ಚಾಲನೆ ನೀಡಲಾಯಿತು.
ಶಾಸಕಿ ಭಾಗೀರಥಿ ಮುರುಳ್ಯ ದೀಪ ಪ್ರಜ್ವಲನೆ ಮಾಡಿ ಶಾಖೆ ಉದ್ಘಾಟಿಸಿದರು.ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ ಶಾಖೆಯನ್ನು ಹಾಗೂ ಎ.ಟಿ.ಎಂ ಉದ್ಘಾಟಿಸಿದರು.





ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭದ್ರತಾ ಕೋಶ ಉದ್ಘಾಟಿಸಿದರು. ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಮಿತ್ರ ಮೂಕಮಲೆ ಠೇವಣಿ ಪತ್ರ ಹಸ್ತಾಂತರಿಸಿದರು. ಪ್ರಾ. ಕೃ. ಪ. ಸ.ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ ಲಾಕರ್ ಕೀ ಹಸ್ತಾಂತರಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ ಹೊಸ ಸ್ವ ಸಹಾಯ ಸಂಘ ಉದ್ಘಾಟಿಸಿದರು. ಕಾರ್ಯಕ್ರಮದಲ್ಕಿ ವಾಹನ ಸಾಲ ಪತ್ರ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ನ. ನಿರ್ದೇಶಕ ಶಶಿಕುಮಾರ್ ಬಾಲ್ಯೋಟ್ಟು,
ಕಟ್ಟಡ ಮಾಲಕ ಅನಿಲ್ ಕುಮಾರ್, ಡಿಸಿಸಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಗುತ್ತಿಗಾರು ಶಾಖಾ ವ್ಯವಸ್ಥಾಪಕ ಕುಶಾಲಪ್ಪ ಗೌಡ ಯು ವೇದಿಕೆಯಲ್ಲಿದ್ದರು.





ಸಭೆಯಲ್ಲಿ ಕಟ್ಟಡ ಮಾಲಕ ಅನಿಲ್ ಕುಮಾರ್ ಮತ್ತು ಶಮ್ನ ದಂಪತಿಗಳನ್ನು ಗೌರವಿಸಲಾಯಿತು. ಶಾಖಾ ವ್ಯವಸ್ಥಾಪಕರಾದ ಕುಶಾಲಪ್ಪ ಗೌಡ, ಉದ್ಘಾಟನಾ ಕಾರ್ಯಕ್ರಮದ ಮೇಲ್ವಿಚಾರಣಾ ಜವಾಬ್ದಾರಿ ವಹಿಸಿದ ಪುತ್ತೂರು ಶಾಖ ವ್ಯವಸ್ಥಾಪಕ ಹರೀಶ. ಪಿ, ಬ್ಯಾಂಕ್ ನ ಸ್ವಸಹಾಯ ಸಂಘಗಳ ಮೇಲ್ವಿಚಾರಕ ರಂಜಿತ್ ಕುಮಾರ್, ವಲಯ ಮೇಲ್ವಿಚರಕರಾದ ಮನೋಜ್ ಕುಮಾರ್ , ಸುಬ್ರಹ್ಮಣ್ಯ ಭಟ್, ಆದರ್ಶ ಬಿ ಇವರನ್ನು ಸನ್ಮಾನಿಸಲಾಯಿತು. ಪ್ರದೀಪ್ ಕುಮಾರ್, ರತನ್ .ಕೆ .ಎಸ್, ವಿನಯ್ ಕುಮಾರ್, ನವೋದಯ ವಲಯ ಮೇಲ್ವಿಚಾರಕರಾದ ಶ್ರೀಧರ್ , ದಾಮೋದರ್, ಹೇಮಂತ್ , ಗಂಗಾಧರ್, ಪ್ರಕಾಶ್ ಜೆ, ಸವಿತಾ ಎಸ್.ಟಿ, ಚಂದ್ರಕಲಾ, ಅನಿತಾ, ದೇವಿಕ ಯವರುಗಳನ್ನು ಗೌರವಿಸಲಾಯಿತು. ಶಶಿಕುಮಾರ್ ಬಾಲ್ಯೋಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ
ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಮಾಜಿ ಜಿ.ಪಂ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ, ಕೇಂದ್ರೀಯ ರಬ್ಬರ್ ಬೋರ್ಡ್ ಸದಸ್ಯ ಮುಳಿಯ ಕೇಶವ ಭಟ್, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್, ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟೇಶ್ ಎಚ್.ಎಲ್, ಜಯಪ್ರಕಾಶ್ ಕೂಜುಗೋಡು, ರವೀಂದ್ರ ಕುಮಾರ್ ರುದ್ರಪಾದ, ಮತ್ತಿತರರು ಉಪಸ್ಥಿತರಿದ್ದರು.
ಪೋಟೋ: ಪ್ರಕೃತಿ ಸ್ಟುಡಿಯೋ ಗುತ್ತಿಗಾರು












