ಉರ್ದು ಮತ್ತು ಇತರ ಅಲ್ಪ ಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರ ಕಛೇರಿ, ನೃಪತುಂಗ ರಸ್ತೆ, ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಸನ, ಇವರ ಸಂಯುಕ್ತ ಆಶ್ರಯದಲ್ಲಿ, ಜವಾಹರ ನವೋದಯ ವಿದ್ಯಾಲಯ ಮಾವಿನ ಕೆರೆ ಹಾಸನ ಇಲ್ಲಿ ನಡೆದ ಪ್ರೌಢ ಶಾಲಾ ವಿಭಾಗದ ರಾಜ್ಯ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ಸ್ಪರ್ಧೆಯಲ್ಲಿ ರೋಟರಿ ಪ್ರೌಢ ಶಾಲೆಯ ವಿದ್ಯಾರ್ಥಿ ಅಹನ್ ಕಿರಣ್ ಭಾಗವಹಿಸಿ 6ನೇ ಸ್ಥಾನ ಪಡೆದು ಪ್ರೋತ್ಸಾಹಕ ಬಹುಮಾನ ಪಡೆದಿರುತ್ತಾರೆ.









ಇವರಿಗೆ ಸಂಸ್ಥೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ಶಾಲಿನಿ ರಾಮಕೃಷ್ಣ ತರಬೇತಿ ನೀಡಿರುತ್ತಾರೆ. ಕಿರಣ್ ಕುಮಾರ್ ಹಾಗೂ ಶ್ರೀಮತಿ ಪವಿತ್ರ ಕಾವೇರಿ ದಂಪತಿಗಳ ಪುತ್ರ.










