ಬೆಟ್ಟಂಪಾಡಿ ಆಟೋ ಚಾಲಕ ಜಬ್ಬಾರ್ ಅನುಮಾನಸ್ಪದ ಸಾವು, ಕೊಲೆ ಆರೋಪ

0

ಸತ್ಯಾಸತ್ಯತೆ ಬಯಲಿಗೆಳೆಯಲು ಎಸ್‌ಡಿಪಿಐ ಆಗ್ರಹ

ಸುಳ್ಯದ ಬೆಟ್ಟಂಪಾಡಿಯ ಆಟೋ ಚಾಲಕ ಜಬ್ಬಾರ್ ಸಾವಿನ ಹಿಂದೆ ಅವರ ಕುಟುಂಬವು ಅನುಮಾನ ವ್ಯಕ್ತಪಡಿಸುತ್ತಿದ್ದು, ಕೊಲೆ ಆರೋಪ ದೂರು ದಾಖಲಿಸಿದೆ. ಪೊಲೀಸ್ ಇಲಾಖೆಯು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳೆಯಬೇಕು. ಈಗಾಗಲೇ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಒಂದಕ್ಕಿಂತ ಹೆಚ್ಚು ಜನರು ಭಾಗಿಯಾಗಿರುವಂತೆ ಸಂಶಯ ಮೂಡುತ್ತಿದೆ. ಆದ್ದರಿಂದ ಪೊಲೀಸ್ ಇಲಾಖೆಯು ಕ್ಷಿಪ್ರ ತನಿಖೆಯ ಮೂಲಕ ಆರೋಪಿಗಳನ್ನು ಬಂಧಿಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಎಸ್ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಮಿರಾಝ್ ಸುಳ್ಯ ರವರು ಪತ್ರಿಕಾ ಹೇಳಿಕೆಯ ಮೂಲಕ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.