ಸುದ್ದಿ ದೀಪಾವಳಿ ಬಲಿಯೇಂದ್ರ ಅಲಂಕಾರ ಸ್ಪರ್ಧೆ

0

ಸ್ಪರ್ಧೆಗೆ ಚಾಲನೆ ನೀಡಿದ ಚಿತ್ರನಟಿ ಪಾಯಲ್ ರಾಧಾಕೃಷ್ಣ

ದೀಪಾವಳಿ ಪ್ರಯುಕ್ಯ ಸುದ್ದಿ ಸಮೂಹ ಸಂಸ್ಥೆಯು ಸುದ್ದಿ ಚಾನೆಲ್ ನೇತೃತ್ವದಲ್ಲಿ ಹಮ್ಮಿಕೊಂಡ ಬಲಿಯೇಂದ್ರ ಅಲಂಕಾರ
ಸ್ಪರ್ಧೆಗೆ ಇಂದು ಚಾಲನೆ ನೀಡಲಾಯಿತು.

ಮಂಡ್ಯದ ಗುರು ದೇವ ಲಲಿತಕಲಾ ಅಕಾಡೆಮಿಯ ಸ್ಥಾಪಕ , ಕನಕಮಜಲಿನ ರಾಧಾಕೃಷ್ಣ ಮೂರ್ಜೇ ಅವರ ಮನೆಯಲ್ಲಿ ಚಿತ್ರೀಕರಣ ನಡೆಸುವುದರೊಂದಿಗೆ ಚಾಲನೆ ನೀಡಲಾಯಿತು.

ರಾಧಾಕೃಷ್ಣ ಮೂರ್ಜೆಯವರ ಪುತ್ರಿ, ಖ್ಯಾತ ತೆಲುಗು ಚಿತ್ರನಟಿ ಪಾಯಲ್ ರಾಧಾಕೃಷ್ಣ ಅವರು ಶುಭ ಹಾರೈಸಿ ಮಾತನಾಡಿ, ಆಚರಣೆಗಳ ಉಳಿವಿಗಾಗಿ ಇಂತಹ ಕಾರ್ಯ ನಡೆಸುತ್ತಿರುವುದು ಸಂತೋಷದ ಸಂಗತಿ. ನಾನು ಎಲ್ಲೇ ಇದ್ದರೂ ದೀಪಾವಳಿ ಸಂಭ್ರಮವನ್ನು ಮಿಸ್ ಮಾಡಿಕೊಳ್ಳುವುದಿಲ್ಲ.” ಎಂದರು.

ರಾಧಾಕೃಷ್ಣ ಮೂರ್ಜೆಯವರು ಶುಭ ಹಾರೈಸಿದರು. ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆಯವರು ಸ್ವಾಗತಿಸಿದರು. ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಪ್ರಸ್ತಾವನೆಗೈದರು.

ಸುದ್ದಿ ಪ್ರಕಾಶಕ ಕುಶಾಂತ್ ಕೊರತ್ಯಡ್ಕ, ಸುದ್ದಿ ಬಳಗದ ರಕ್ಷಿತ್ ಕುಕ್ಕುಜಡ್ಕ, ಅನಿಲ್ ಕುಮಾರ್ ಸಂಪ, ಪ್ರಜ್ಞಾ ಪೂಜಾರಿ ಕೇರ್ಪಳ ಉಪಸ್ಥಿತರಿದ್ದರು.

ಶಿಕ್ಷಕಿ, ಲೇಖಕಿ ಶ್ರೀಮತಿ ಹೇಮಾ ಕಜೆಗದ್ದೆ , ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಪ್ರಜ್ಞಾ ಪೂಜಾರಿ ಕೇರ್ಪಳ, ಮೊದಲಾದವರು ಉಪಸ್ಥಿತರಿದ್ದರು.

ಬಲಿಯೇಂದ್ರ ಅಲಂಕಾರದ ಆಯ್ದ ಮನೆಗಳಿಗೆ ತೆರಳಿ ಚಿತ್ರೀಕರಣ ನಡೆಸಲಾಗುತ್ತಿದೆ.