ಮರ್ಕಂಜ : ತುಂಬೆತ್ತಡ್ಕ ಬದಿಮಾರುವಿನಲ್ಲಿ ಶಿರಾಡಿ ದೈವಕ್ಕೆ ತಂಬಿಲ ಸೇವೆ – ಸಾನಿಧ್ಯ ಅಭಿವೃದ್ಧಿಗೆ ಸಮಾಲೋಚನಾ ಸಭೆ

0

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚ ಸ್ಥಾಪನೆಯಲ್ಲಿ ಒಂದಾಗಿರುವ ಮುಂಡೋಡಿ ಶಿರಾಡಿ ಯಾನೆ ರಾಜನ್ ದೈವಕ್ಕೆ ತುಂಬೆತ್ತಡ್ಕ ಬದಿಮಾರು ಎಂಬಲ್ಲಿ ದೀಪಾವಳಿ ಪ್ರಯುಕ್ತ ತಂಬಿಲ ಸೇವೆಯು ಅ. 22ರಂದು ನಡೆಯಿತು.

ಈ ಸಂದರ್ಭದಲ್ಲಿ ದೈವದ ಸಾನಿಧ್ಯದಲ್ಲಿ ಅಭಿವೃದ್ಧಿ ಕಾರ್ಯಗಳಾದ ಕಟ್ಟೆ ನಿರ್ಮಾಣ ಮತ್ತು ಆವರಣ ಗೋಡೆ ರಚನೆ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಸ್ಥಳದಲ್ಲಿ ದೈವಜ್ಞರ ಮೂಲಕ ಒಂದು ದಿನದ ಪ್ರಶ್ನಾ ಚಿಂತನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ ಗೌಡ ಕಾಯರ, ದೈವಗಳ ಭಂಡಾರ ಛಾವಡಿ ಮುಂಡೋಡಿ ಮಾಳಿಗೆಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ಕಿಶೋರ್ ಬಾಳಿಲ, ಮಾಜಿ ಮುಕ್ತೇಸರರೂ ಹಿರಿಯರೂ ಆದ ಯುವರಾಜ್ ಜೈನ್ ಬಲ್ನಾಡು ಪೇಟೆ, ಮಾಜಿ ಮುಕ್ತೇಶರರಾದ ರಾಘುವ ಗೌಡ ಕಂಜಿಪಿಲಿ, ಹಾಗೂ ಪ್ರಮುಖರಾದ ಮಂಜುನಾಥ ಪುರುಷ(ಮೈಸೂರು) ಸಂಕೇಶ, ಮುಂಡೋಡಿ ಮಾಳಿಗೆಯ ಪ್ರಧಾನ ಕಾರ್ಯದರ್ಶಿ ಸಾಂತಪ್ಪ ರೈ ಅಂಗಡಿಮಜಲು, ಉಭಯ ಗ್ರಾಮಗಳ ಹಿರಿಯರು, ಭಕ್ತಾದಿಗಳು ಉಪಸ್ಥಿತರಿದ್ದರು.