ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ನಡೆಯುವ ತಿಂಗಳು ಪೂರ್ತಿ ನಡೆಯುವ ಕಾರ್ತಿಕ ದೀಪೋತ್ಸವವು ಅ. ೨೨ರಿಂದ ಆರಂಭಗೊಂಡಿದ್ದು, ನ. ೨೦ರವರೆಗೆ ನಡೆಯಲಿರುವುದು. ನಾಲ್ಕನೇ ದಿನವಾದ ನಿನ್ನೆ ಭಜನಾ ಕಾರ್ಯಕ್ರಮ, ಕಾರ್ತಿಕ ದೀಪೋತ್ಸವ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.








ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಹಾಗೂ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.










