ಸುಬ್ರಹ್ಮಣ್ಯ : ಕಾರುಗಳ ಮುಖಾಮುಖಿ ಡಿಕ್ಕಿ

0

ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ, ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲು

ಸುಬ್ರಹ್ಮಣ್ಯ ಸಮೀಪ ಮುಖ್ಯರಸ್ತೆಯಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಎರಡೂ ಕಾರಿನಲ್ಲಿದ್ದ ಸವಾರರಿಗೆ ಸಣ್ಣಪುಟ್ಟ ಗಾಯಗೊಂಡು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಅಕ್ಟೋಬರ್ 26 ರಂದು ಬೆಳಿಗ್ಗೆ ನಡೆದಿದೆ.

ಕೇರಳದ ಬಂದಡ್ಕ ಕಡೆಯಿಂದ ಸಕಲೇಶಪುರಕ್ಕೆ ಹೋಗುತ್ತಿದ್ದ ವ್ಯಾಗನರ್ ಕಾರು ಅದೇ ರೀತಿ ಸುಬ್ರಹ್ಮಣ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಚಿತ್ರದುರ್ಗ ಮೂಲದವರ ಕಾರಿಗೆ ಪರಸ್ಪರ ಡಿಕ್ಕಿ ಸಂಭವಿಸಿದೆ. ಘಟನೆಯಿಂದ ಬಂದಡ್ಕ ಮೂಲದ ಕಾರಿನಲ್ಲಿದ್ದ ಮಗು ಹಾಗೂ ಓರ್ವ ಮಹಿಳೆ ಸೇರಿ ನಾಲ್ಕು ಮಂದಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಅದೇ ರೀತಿ ಚಿತ್ರದುರ್ಗ ಮೂಲದ ಕಾರಿನ ಓರ್ವ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ.ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.