ಕೋಲ್ಚಾರು: ಮಹಿಳೆಗೆ ಹಾವು ಕಡಿತ, ಆಸ್ಪತ್ರೆಗೆ ದಾಖಲು

0

ಆಲೆಟ್ಟಿ ಗ್ರಾಮದ ಕೋಲ್ಚಾರಿನ ಮಹಿಳೆಗೆ ಹಾವು ಕಡಿತವಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ೨೬ರಂದು ಆಲೆಟ್ಟಿ ಗ್ರಾಮದ ಕೋಲ್ಚಾರಿನಲ್ಲಿ ಸಂಭವಿಸಿದೆ.

ಕೋಲ್ಚಾರಿನ ವಿನುತಾರವವರು ಬೆಳಿಗ್ಗೆ ಮನೆಯ ಹೊರ ಭಾಗದಲ್ಲಿ ಇರಿಸಿದ್ದ ಚಪ್ಪಲಿ ಹಾಕಲು ಹೋದಾಗ ಚಪ್ಪಲಿನ ಒಳಗಡೆ ಸೇರಿಕೊಂಡಿದ್ದ ಹಾವು ಇವರ ಕಾಲಿಗೆ ಕಚ್ಚಿತು. ಕೂಡಲೇ ಅವರನ್ನು ಮನೆಯವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದು ಪ್ರಾಥಮಿಕ ಚಿಕಿತ್ಸೆ ಬಳಿಕ ತುರ್ತು ಚಿಕಿತ್ಸೆ ವಿಭಾಗದಲ್ಲಿ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.