ಡಾl ರವಿ ಕಕ್ಕೆ ಪದವು ಅವರಿಗೆ ಸ್ವಚ್ಛತಾ ರಾಯಭಾರಿ ಪ್ರಶಸ್ತಿ

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಏರಿಯ ಎಫ್ ನ ಪ್ರಾಂತೀಯ ಸಮ್ಮೇಳನ ಬೆಂಗಳೂರಿನ ದೇವನಹಳ್ಳಿಯಲ್ಲಿ ಅ.26 ರಂದು ನಡೆದು ಪ್ರಾಂತೀಯ ಎಲ್ಲಾ ಲಿಜನ್ ಗಳಲ್ಲಿ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಅತ್ಯುತ್ತಮ ಲೀಜನ್ ಆಗಿ ಟಾಪ್ ಟೆನ್ ಅಲ್ಲಿ ಆಯ್ಕೆ ಆಗಿಪ್ರಶಸ್ತಿಯನ್ನು ಪಡೆದಿರುತ್ತದೆ. 2025 – 26ನೇ ಸಾಲಿನಲ್ಲಿ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಸಾರ್ವಜನಿಕ ಸಂಪರ್ಕ ಸೇವೆಗಳು, ವ್ಯಕ್ತಿತ್ವ ವಿಕಸನ ತರಬೇತಿಗಳು, ಸಮುದಾಯ ಅಭಿವೃದ್ಧಿ ಕಾರ್ಯಗಳು ಅಂತೆ ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಜನಪಯೋಗಿ ಕಾರ್ಯಕ್ರಮಗಳನ್ನ ಮಾಡಿ ಟಾಪ್ ಟೆನ್ ಅಲ್ಲಿ ಆಯ್ಕೆಯಾಗಿ ಪ್ರಶಸ್ತಿ ಬಂದಿರುತ್ತದೆ.
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರ ಅಧ್ಯಕ್ಷ ಎಂ.ಆರ್. ಜಯೇಶ್, ರಾಷ್ಟ್ರೀಯ ಉಪಾಧ್ಯಕ್ಷ ಸಿದ್ದ ಗಂಗಯ್ಯ ಹಾಗೂ ರಾಷ್ಟ್ರಮಟ್ಟದ ಅಧಿಕಾರಿಗಳು ಈ ಪ್ರಶಸ್ತಿಯನ್ನು ನೀಡಿರುವರು.
















ಡಾ. ರವಿ ಕಕ್ಕೆ ಪದವು ಅವರಿಗೆ ಸ್ವಚ್ಛತಾ ರಾಯಭಾರಿ ಪ್ರಶಸ್ತಿ
ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನಿಕಟ ಪೂರ್ವ ಅಧ್ಯಕ್ಷ ಡಾ. ರವಿ ಕಕ್ಕೆ ಪದವು ಅವರು ಕುಕ್ಕೆ ಕ್ಷೇತ್ರದಲ್ಲಿ ನಿರಂತರವಾಗಿ ಪ್ರತಿ ರವಿವಾರ 50 ರಿಂದ 60 ಜನರಿರುವ ರವಿ ಕಕ್ಕೆ ಪದವು ಸಮಾಜ ಟ್ರಸ್ಟ್ ನ ಸದಸ್ಯರು ಹಾಗೂ ಸೀನಿಯರ್ ಚೇಂಬರ್ ನ ಸದಸ್ಯರುಗಳನ್ನ ಒಳಗೊಂಡು ಕುಮಾರಧಾರ ಸ್ಥಾನಘಟ್ಟದಿಂದ ಕುಕ್ಕೆ ಕ್ಷೇತ್ರದ ಅಕ್ಕಪಕ್ಕಗಳಲ್ಲಿ, ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಸ್ವಚ್ಛತಾ ರಾಯಭಾರಿ ಪ್ರಶಸ್ತಿಯನ್ನು ನೀಡಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಗೌರವಿಸಿರುತ್ತಾರೆ.
ಸುಬ್ರಹ್ಮಣ್ಯ ಕುಕ್ಕೆಶಿ ಶ್ರೀ ಸೀನಿಯರ್ ಚೇಂಬರ್ ಅಧ್ಯಕ್ಷ ವೆಂಕಟೇಶ ಹೆಚ್ ಎಲ್, ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಕಾರ್ಯದರ್ಶಿ ಗೋಪಾಲ್ ಎಣ್ಣೆ ಮಜಲ್, ಕೋಶಾಧಿಕಾರಿ ಮೋನಪ್ಪ ಡಿ ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಉಪಸ್ಥಿತರಿದ್ದರು.










