ಇತ್ತೀಚೆಗೆ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿ ಅದೃಷ್ಟವಶಾತ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ, ಚೆಂಬು ಗ್ರಾಮದ ದಬ್ಬಡ್ಕ ಹೊಸೂರು ಜಯರಾಮರವರ ಪುತ್ರ ನಿರುಪಮರವರನ್ನು ಕೊಡಗು ಜಿಲ್ಲೆ ಉಪ ವಿಭಾಗಾಧಿಕಾರಿಗಳು, ಮಡಿಕೇರಿ ತಹಶೀಲ್ದಾರರು ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರ ಸೂಚನೆ ಮೇರೆಗೆ, ಅ. ೨೧ ರಂದು ಉಪ ವಿಭಾಗಾಧಿಕಾರಿಗಳು ಹಾಗೂ ಮಡಿಕೇರಿ ತಹಶೀಲ್ದಾರ್ ಮತ್ತು ಕಂದಾಯ ಪರಿವೀಕ್ಷಕರು ಹಾಗು ಸಿಬ್ಬಂದಿಗಳು ಮತ್ತು ಗ್ರಾಮದ ಪ್ರಮುಖರು ಭೇಟಿಯಾಗಿ ಅವಘಡ ಸಂಭವಿಸಿದ ಹೊದ್ದೆಟ್ಟಿ ಹೊಳೆ ಜಾಗವನ್ನು ಪರಿಶೀಲಿಸಿದ ಬಳಿಕ ನಿರೂಪಮ ಮನೆಗೆ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತನಾಡಿ ಧೈರ್ಯ ತುಂಬಿದರು .
ಈ ಎಲ್ಲಾ ಘಟನೆಯ ವಿವರವನ್ನು ಶಾಸಕರ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಸಂಬಂಧ ಪಟ್ಟ ಇಲಾಖೆಗಳಿಗೆ ತಲುಪಿಸಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಉಪ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ.

























