ಆಲೆಟ್ಟಿ ಗ್ರಾಮ ಸಮಿತಿಯ ವತಿಯಿಂದ ಸಮುದಾಯ ಬಾಂಧವರಿಗಾಗಿ ಪಂದ್ಯಾಟದ ಆಯೋಜನೆ
ಭಾರತೀಯ ತೀಯ ಸಮಾಜ ಆಲೆಟ್ಟಿ ಗ್ರಾಮ ಸಮಿತಿಯ ಆಶ್ರಯದಲ್ಲಿ 8 ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ವು ನ. 02 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜ್ ಕೊಡಿಯಾಲ ಬೈಲು ಮೈದಾನದಲ್ಲಿ ನಡೆಯಲಿರುವುದು.
ಬೆಳಗ್ಗೆಪಂದ್ಯಾಟದ ಉದ್ಘಾಟನೆಯು ಆಲೆಟ್ಟಿ ಗ್ರಾಮ ಸಮಿತಿ ಅಧ್ಯಕ್ಷರು, ಮುಕಾಂಬಿಕಾ ಆಟೋ ಡೀಸಲ್ ವರ್ಕ್ಸ್ ಗ್ಯಾರೇಜ್ ಮಾಲಕ ದಾಮೋದರ ಪರಮಂಡಲ ರವರ ಅದ್ಯಕ್ಷತೆಯಲ್ಲಿ ನಡೆಯಲಿದೆ.








ಕುಂಞರಾಮನ್ ಅರಂಬೂರು ರವರು ಪಂದ್ಯಾಟವನ್ನು ಉದ್ಘಾಟಿಸಲಿರುವರು. ಸಂಜೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಲಾಗುವುದು.
ವಿನ್ನರ್ ಅಪ್ ರೂ. 15,000/- ಮತ್ತು ಭಗವತಿ ಕಪ್, ರನ್ನರ್ ಅಪ್ ರೂ. 10,000/-ಮತ್ತು ಭಗವತಿ ಕಪ್ ಹಾಗೂ ವಯುಕ್ತಿಕ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು. ಪಂದ್ಯಾಟದಲ್ಲಿ ತೀಯ ಸಮುದಾಯ ಬಾಂಧವರಿಗೆ ಮಾತ್ರ ಆಡಲು ಅವಕಾಶ ಇರುವುದು. ಮದ್ಯಾಹ್ನದ ಎಲ್ಲಾ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.










