ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಚಿತ್ರಕಲೆ, ರಂಗೋಲಿ, ಘೋಷಣಾ ವಾಕ್ಯ ಬರವಣಿಗೆ ಸ್ಪರ್ಧೆ

0

ರೋಟರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ

ತಾಲೂಕು ಶಿಕ್ಷಣ ಇಲಾಖೆ ಹಾಗೂ ರೋಟರಿ ಕ್ಲಬ್ ಸುಳ್ಯ ಇದರ ಜಂಟಿ ಆಶ್ರಯ ದಲ್ಲಿ ಕೇಂದ್ರ ಸರ್ಕಾರದ ನಶಾ ಮುಕ್ತ ಅಭಿಯಾನ ಅಡಿಯಲ್ಲಿ ತಾಲೂಕು ಮಟ್ಟದಲ್ಲಿ ಯುವ ಜನತೆಯಲ್ಲಿ ಮಾದಕ ದ್ರವ್ಯ ಸೇವನೆಯನ್ನು ತಡೆಗಟ್ಟುವ ಬಗ್ಗೆ ಪ್ರಾಢಶಾಲೆಯ ವಿದ್ಯಾರ್ಥಿಗಳಿಗೆ ಚಿತ್ರಕಲೆ, ರಂಗೋಲಿ, ಘೋಷಣಾ ವಾಕ್ಯ ಬರವಣಿಗೆ ಸ್ಪರ್ಧೆಯನ್ನು ರೋಟರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ರೋಟರಿ ಅಧ್ಯಕ್ಷರಾದ ರಾಮ್ ಮೋಹನ್ ನೆರವೇರಿಸಿದರು. ಮುಖ್ಯ ಅತಿಥಿ ಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು ಕೆ, ಪ್ರಭಾಕರ ನಾಯಕ್, ನಗರ ಪಂಚಾಯತ್ ವಿಕಲ ಚೇತನ ಇಲಾಖೆಯ ಮೇಲ್ವಿಚಾರಕರಾದ ಪ್ರವೀಣ್ ನಾಯಕ್, ಶಿಕ್ಷಣ ಸಂಯೋಜಕರಾದ ಧನಲಕ್ಷ್ಮೀ, ಸಂದ್ಯಾ ಕುಮಾರಿ, ಉದಯ ಕುಮಾರ್ ಸಿ ಆರ್ ಪಿ, ಶ್ರೀಮತಿ ಮಮತ, ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಜ್ಯೋಸ್ನಾ, ಪ್ರಾಢಶಾಲಾ ಮುಖ್ಯ ಗುರು ಗಳಾದ ವೀಣಾ ಶೇಡಿಕಜೆ ಉಪಸ್ಥಿತರಿದ್ದರು.

ಮಾದಕ ದ್ರವ್ಯ ಸೇವನೆ ಯನ್ನು ವಿರೋಧಿ ಸುವ ಸಲುವಾಗಿ ಪ್ರವೀಣ್ ನಾಯಕ್ ಅವರು ಪ್ರತಿಜ್ಞಾ ವಿಧಿ ಭೋದಿಸಿದರು. ಮೂರು ಸ್ಪರ್ಧೆ ಗಳಲ್ಲಿ ವಿಜೇತ ರಾದ ವಿದ್ಯಾರ್ಥಿಗಳಿಗೆ ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ರೋಟರಿ ಅಧ್ಯಕ್ಷರು ಬಹುಮಾನ ನೀಡಿಗೌರವಿಸಿದರು.

ಶ್ರೀಮತಿ ಜೋಸ್ನಾ ಸ್ವಾಗತಿಸಿ, ಜಯಂತಿ ವಂದಿಸಿದರು. ಶ್ರೀಮತಿ ಮಮತ ಕಾರ್ಯಕ್ರಮ ನಿರೂಪಿಸಿದರು