ಕೋಲ್ಚಾರು ಶಾಲೆಯಲ್ಲಿ ನಡೆದ ಘಟನೆ
ಕೋಲ್ಚಾರು ಸರ್ಕಾರಿ ಶಾಲೆಯ ಶಿಕ್ಷಕರೋರ್ವರು 6ನೇ ತರಗತಿಯ ವಿದ್ಯಾರ್ಥಿಗೆ ಬಡಿಗೆಯಿಂದ ಥಳಿಸಿದ ಆರೋಪ ಕೇಳಿ ಬಂದಿದ್ದು ಘಟನೆಯಿಂದ ವಿದ್ಯಾರ್ಥಿಯ ಕೈ ಮೂಳೆ ಮುರಿತ ಗೊಂಡ ಘಟನೆ ಅಕ್ಟೋಬರ್ 31ರಂದು ಸಂಜೆ ನಡೆದಿದೆ.















ವಿದ್ಯಾರ್ಥಿ ಸಫ್ವಾನ್ ಎಂಬತ ಶಾಲೆಯಲ್ಲಿ ಮೂವರು ವಿದ್ಯಾರ್ಥಿಗಳೊಂದಿಗೆ ಆಟವಾಡುತ್ತಿದ್ದ ಸಂದರ್ಭ ಶಿಕ್ಷಕ ಮನುಕುಮಾರ್ ಎಂಬುವವರು ದೊಣ್ಣೆ ಇಂದ ಹೊಡೆದಿದ್ದಾರೆ ಎನ್ನಲಾಗಿದ್ದು ಪೆಟ್ಟು ತಿಂದ ವಿದ್ಯಾರ್ಥಿಯ ಕೈಯ ಮೂಳೆ ಮುರಿತಗೊಂಡಿದೆ.
ಸಂಜೆ ಮನೆಗೆ ಅಳುತ್ತಾ ಬಂದ ವಿದ್ಯಾರ್ಥಿಯನ್ನು ನೋಡಿದ ಮನೆಯವರು ಮದ್ದು ಹಚ್ಚಿ ಸಮಾಧಾನ ಪಡಿಸಲು ಪ್ರಯತ್ನಿಸಿದ್ದು ಬೆಳಿಗ್ಗೆ ಆಗುವ ಸಂದರ್ಭ ಕೈಯಲ್ಲಿ ಊತ ಇದ್ದದ್ದನ್ನು ಕಂಡು ನವಂಬರ್ 1 ರಂದು ಬೆಳಿಗ್ಗೆ ಸುಳ್ಯ ಆಸ್ಪತ್ರೆಗೆ ತಂದಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಕೈ ಮೂಳೆ ಮುರಿತಗೊಂಡಿದೆ ಎಂದು ಹೇಳಿದ್ದು ಚಿಕಿತ್ಸೆ ನೀಡಿ ಕಳುಹಿಸಿಕೊಟ್ಟಿದ್ದಾರೆ. ಈ ಘಟನೆಯ ಬಗ್ಗೆ ಪೋಷಕರು ಆತಂಕಗೊಂಡಿದ್ದು ಪೊಲೀಸರಿಗೆ ಈ ಬಗ್ಗೆ ದೂರು ಕೊಡುವುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ.










