ಕರ್ಲಪ್ಪಾಡಿ ಶಾಸ್ತಾವೇಶ್ವರ ದೇವಸ್ಥಾನ ವ್ಯ.ಸಮಿತಿಗೆ 9 ಮಂದಿ ಸದಸ್ಯರ ನೇಮಕ

0

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.


ಸುಳ್ಯದಲ್ಲಿ ಉದ್ಯಮಿಯಾಗಿರುವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಧನಂಜಯ ಅಡ್ಪಂಗಾಯ, ಅಜ್ಜಾವರ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ, ನ್ಯಾಯವಾದಿ ಶ್ರೀಹರಿ ಕುಕ್ಕುಡೇಲು, ಅಜ್ಜಾವರ ಗ್ರಾ.ಪಂ. ಮಾಜಿ ಸದಸ್ಯ ರೂಪಾನಂದ ಕರ್ಲಪ್ಪಾಡಿ. ಕೃಷಿಕ ರಾಮಣ್ಣ ಪೂಜಾರಿ ಪೊಡುಂಬ, ಶ್ರೀಮತಿ ವಿಮಲಾರುಣ ಪಡ್ಡಂಬೈಲು, ಶ್ರೀಮತಿ ಸುಲೋಚನಾ ರವೀಶ ಮಾವಿನಪಳ್ಳ, ಸುಂದರ ಎ ನೆಹರೂನಗರ, ಹಾಗೂ ದೇವಸ್ಥಾನದ ಅರ್ಚಕ ಈಶ್ವರ ಭಟ್ ರವರು ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾಗಿದ್ದಾರೆ.