ಬಳ್ಪದ ಸೀತಾರಾಮ ರಾವ್ ಮೊರಾಜೆ ನಿಧನ

0


ಬಳ್ಪ ಗ್ರಾಮದ ಕೊರಪ್ಪಣೆ ನಿವಾಸಿಯಾಗಿದ್ದ ಮೊರಾಜೆ ಸೀತಾರಾಮ ರಾವ್ ಅವರು ಇಂದು ಬೆಳಿಗ್ಗೆ ಕಾವುನಲ್ಲಿರುವ ತನ್ನ ಮಗಳ ಮನೆಯಲ್ಲಿ ನಿಧನರಾದರು. ಅವರಿಗೆ 99 ವರ್ಷ 4 ತಿಂಗಳು ವಯಸ್ಸಾಗಿತ್ತು.
ಕೃಷಿಕರೂ, ಬಳ್ಪದ ವಿಷ್ಣುಮಂಗಿಲ ಮಹಾವಿಷ್ಣು ದೇವಸ್ಥಾನದ ಅರ್ಚಕರೂ ಆಗಿದ್ದ ಅವರು ಎಂಟು ವರ್ಷಗಳ ಹಿಂದೆ ಇಲ್ಲಿಯ ಆಸ್ತಿ ಮಾರಿ ಕಾವುಗೆ ಹೋಗಿ ನೆಲೆಸಿದ್ದರು.
ಮೃತರು ಪತ್ನಿ ಶ್ರೀಮತಿ ಕೃಷ್ಣ ಕುಮಾರಿ, ಪುತ್ರಿಯರಾದ ನಳಿನಾಕ್ಷಿ, ಸವಿತಾ, ಮಮತಾ, ಶೋಭಿತಾ, ಕವಿತಾರನ್ನು , ಸೊಸೆ, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.