ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ವಿದ್ಯಾರ್ಥಿಗಳಿಗೆ ಪ್ರಬಂಧ, ಆಶುಭಾಷಣ, ಜಾನಪದ ಗೀತೆ ಮತ್ತು ಕಂಠಪಾಠ ಸ್ಪರ್ಧೆಗಳನ್ನು ಆಯೋಜಿಸಲಾಯಿತು. 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂಟರ್ ಹೌಸ್ ಸ್ಪರ್ಧೆ ಎಂಬ ಕಾರ್ಯಕ್ರಮದಡಿಯಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ವಿಶೇಷ ಖಾದ್ಯ ಮತ್ತು ಆಹಾರ, ರಾಜ್ಯದ ವಿವಿಧ ಇತಿಹಾಸಿಕ ಸ್ಮಾರಕಗಳ ಮಾದರಿ, ನಮ್ಮ ರಾಜ್ಯದ ವಿಶೇಷ ಕವಿಗಳ ಕೊಲಾಜ್ ತಯಾರಿಕೆ ಮತ್ತು ಕುವೆಂಪುರವರ ಬಾರಿಸು ಕನ್ನಡ ಡಿಂಡಿಮ ಎಂಬ ಶೀರ್ಷಿಕೆಯೊಂದಿಗೆ ಕನ್ನಡ ರಾಜ್ಯದ ನಕ್ಷೆಯನ್ನು ಹಳದಿ ಮತ್ತು ಕೆಂಪು ಬಣ್ಣದ ಹೂ, ತರಕಾರಿ ಮತ್ತು ಹಣ್ಣುಗಳಿಂದ ರಚಿಸಲಾಯಿತು.








ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಪ್ರಾಂಶುಪಾಲರಾದ ಶೋಭಾ ಕಿಶೋರ್ ರವರು ನಮ್ಮ ನಾಡು ಭಾಷೆ ಮತ್ತು ಕಲೆಯನ್ನು ಉನ್ನತ ಸ್ಥಾನಕ್ಕೆ ತಲುಪಿಸುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರು ವಿದ್ಯಾರ್ಥಿಗಳು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.










