ನಿಧಿ ಬಿ‌.ಡಿ ಚಾರ್ಟಡ್ ಅಕೌಂಟ್ ಪರೀಕ್ಷೆಯಲ್ಲಿ ಉತ್ತೀರ್ಣ

0

ಸುಬ್ರಹ್ಮಣ್ಯದ ನಿಧಿ ಬಿ‌.ಡಿ ಚಾರ್ಟಡ್ ಅಕೌಂಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದಾಗಿ ತಿಳಿದು ಬಂದಿದೆ.

ಸುಬ್ರಹ್ಮಣ್ಯ ಗ್ರಾ.ಪಂ ನ ಮಾಜಿ ಉಪಾಧ್ಯಕ್ಷ ದಿನೇಶ್ ಬಿ.ಎನ್ ಹಾಗೂ ಸುಬ್ರಹ್ಮಣ್ಯ ಗ್ರಾ.ಪಂ ನ ಹಾಲಿ ಸದಸ್ಯೆ ಭಾರತಿ ದಿನೇಶ್ ಅವರ ಪುತ್ರಿ ನಿಧಿ. ಬಿ‌.ಡಿ ಚಾರ್ಟಡ್ ಅಕೌಂಟ್ ನ ಬೆಸಿಕ್ ಮತ್ತು ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.


ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದು, ಪದವಿ ಶಿಕ್ಷಣವನ್ನು ಸೈಂಟ್ ಆಗ್ನೆಸ್ ಮಂಗಳೂರು ನಲ್ಲಿ ಪಡೆದು, ಬೆಂಗಳೂರಿನ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಪೈನಾನ್ಸ್ ಮತ್ತು ಅಕೌಂಟ್ ನಲ್ಲಿ ಬಿ.ಕಾಂ ಪದವಿ ಪಡೆದರು. ಇವರು ಕೆ.ಪಿ.ಎಂ.ಜಿ ಮುಖಾಂತರ ಆರ್ಟಿಕಲ್ ಶಿಪ್ ಮಾಡಿದ್ದು , ಫೌಂಡೇಶನ್, ಇಂಟರ್ ಮೀಡಿಯೆಟ್ ತೇರ್ಗಡೆಯಾಗಿ ಪೈನಲ್ ಪರೀಕ್ಷೆ ತೇರ್ಗಡೆಯಾಗಿದ್ದಾರೆ.