ಆಕರ್ಷಕ ಸ್ಟೇಡಿಯಂ ನಲ್ಲಿ
ಮೂರು ದಿನಗಳ ಪಂದ್ಯಾಟ,
360 ಕ್ಕೂ ಮಿಕ್ಕಿ ಕ್ರೀಡಾಪಟುಗಳು
ಪಂದ್ಯಾಕೂಟದ ಕುರಿತು
ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿದ ಸಂಘಟಕರು

ಕರ್ನಾಟಕ ರಾಜ್ಯ ವೈಟ್
ಲಿಫ್ಟರ್ಸ್ ಸಂಸ್ಥೆ ಬೆಂಗಳೂರು ಇವರ ಮಾನ್ಯತೆಯೊಂದಿಗೆ
ಸುಳ್ಯಸ್ಪೋರ್ಟ್ಸ್ ಮತ್ತು ಆರ್ಟ್ಸ್ ಎಸೋಸಿಯೇಶನ್ ಇದರ ಆಯೋಜನೆಯಲ್ಲಿ
ಸಂಘಟನಾ ಸಮಿತಿ ಕರ್ನಾಟಕ ರಾಜ್ಯ ವೈಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್
ಮತ್ತು ಸರಕಾರಿ ಜೂನಿಯರ್ ಕಾಲೇಜು ಸುಳ್ಯ ಇದರ ಸಹಯೋಗದಲ್ಲಿ ಮೂರು ದಿನಗಳು ಸುಮಾರು 360 ಕ್ಕೂ ಮಿಕ್ಕಿ ಕ್ರೀಡಾ ಪಟುಗಳು ಭಾಗವಹಿಸಲಿದ್ದು ಎಲ್ಲಾ ರೀತಿಯ ವ್ಯವಸ್ಥೆಗಳು ತಯಾರಾಗಿದೆ. ಆಗಮಿಸುವ ಸ್ಪರ್ಧಿಗಳಿಗೆ ತಂಗಲು ವಸತಿ ವ್ಯವಸ್ಥೆ ಹಾಗೂ ಉಟೋಪಚಾರದ ವ್ಯವಸ್ಥೆ ನಿರ್ವಹಿಸಲು ಮಹಿಳಾ ಸಮಿತಿ ಮತ್ತು ಉಪ ಸಮಿತಿ ಯವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ನಿರೀಕ್ಷೆಗೂ ಮೀರಿ ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು ಕ್ರೀಡಾಭಿಮಾನಿಗಳ ಪ್ರೋತ್ಸಾಹ ಲಭಿಸಿದೆ ಎಂದು ಸ್ಪೋರ್ಟ್ಸ್ ಆರ್ಟ್ಸ್ ಅಸೋಸಿಯೇಷನ್ ನಿರ್ದೇಶಕರಾದ ಅಶೋಕ ಪ್ರಭು ರವರು ತಿಳಿಸಿದರು.

ಸುಳ್ಯದ ಇತಿಹಾಸದಲ್ಲಿ
ಪ್ರಥಮ ಬಾರಿಗೆ
ರಾಜ್ಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಡೆಯಲಿದ್ದು
ರಾಜ್ಯದ 31 ಜಿಲ್ಲೆಗಳಿಂದ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಸುಮಾರು 360 ಮಂದಿ ಚಾಂಪಿಯನ್ಸ್ ವೈಟ್ ಲಿಫ್ಟರ್ಸ್ ಗಳು ಭಾಗವಹಿಸಲಿದ್ದಾರೆ. ಬರುವ ಕ್ರೀಡಾಪಟುಗಳಿಗೆ ಯಾವುದೇ ಕೊರತೆಯಾ ಗದಂತೆ ಅಚ್ಚುಕಟ್ಟಿನ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಡಾ. ಡಿ. ವಿ. ಲೀಲಾಧರ್ ತಿಳಿಸಿದರು.















ಪಂದ್ಯಾಟದ ನಿರ್ವಹಣೆ ಯನ್ನು ಸುಮಾರು 65 ಮಂದಿ ನಿರ್ಣಾಯಕರು ಫೇದರೇಷನ್ ನಿಂದ ಅರ್ಹತೆ ಹೊಂದಿದ ಆಫೀಶಿಯಲ್ಸ್ ನಿರ್ವಹಿಸಲಿದ್ದಾರೆ. ಎಲ್ಲಾ ಕ್ರೀಡೆಗಳಿಗೆ ಮೂಲ ಕ್ರೀಡೆ ವೈಟ್ ಲಿಫ್ಟಿಂಗ್, ಗ್ರಾಮೀಣ ಪ್ರದೇಶದ ಯುವಕರಲ್ಲಿ ಆಸಕ್ತಿ ಹುಟ್ಟುವಂತೆ ಮಾಡುವ ಉದ್ದೇಶಕ್ಕಾಗಿ ಪಂದ್ಯಾಟದ ಆಯೋಜನೆ ಮಾಡಲಾಗಿದೆ ಎಂದು ಬೆಂಗಳೂರು ಫೇಡರೇಷನ್ ಪ್ರಧಾನ ಕಾರ್ಯದರ್ಶಿ ಅನಂದೇ ಗೌಡ ರವರು
ತಿಳಿಸಿದರು.
ಸುಳ್ಯದಲ್ಲಿ ಎಲ್ಲಾ
ರೀತಿಯ ಕ್ರೀಡೆಗಳನ್ನು ಆಯೋಜಿಸಿರುವುದಲ್ಲದೆ ಇದೀಗ ವೈಟ್ ಲಿಫ್ಟ್ ಚಾಂಪಿಯನ್ ಶಿಪ್ ಆಯೋಜನೆ ಮಾಡಿರುವುದರಿಂದ ಕ್ರೀಡಾ ಪಟುಗಳಿಗೆ ಸ್ಫೂರ್ತಿ ನೀಡಿದಂತಾಗುವುದು ಎಂದು ಜಯಪ್ರಕಾಶ್ ರೈ ಯವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಅಸೋಸಿಯೇಷನ್ ಸದಸ್ಯರಾದ ರಮೇಶ್ ಎ, ರಾಧಾಕೃಷ್ಣ ಮಾಣಿಬೆಟ್ಟು, ಸಮಿತಿ ಪದಾಧಿಕಾರಿಗಳಾದ ಗೋಕುಲ್ ದಾಸ್, ಬೂಡು ರಾಧಾಕೃಷ್ಣ ರೈ, ಸುನಿಲ್ ಕೇರ್ಪಳ, ಜನಾರ್ಧನ ದೋಳ,ರವಿಚಂದ್ರ
ಕೊಡಿಯಾಲಬೈಲು, ಕಿರಣ್ ಕುರುಂಜಿ, ಮನೋಜ್ ಕುಮಾರ್, ಭವಾನಿಶಂಕರ್ ಕಲ್ಮಡ್ಕ,ಮಹಿಳಾ ಸಮಿತಿಯ ಲತಾ ಮಧುಸೂಧನ್, ಕಿಶೋರಿ ಶೇಟ್, ಉಷಾ ಜೆ.ಶೆಟ್ಟಿ, ನಮಿತಾ ಪ್ರವೀಣ್ ರಾವ್, ಸುಜಾತ ಕಿರಣ್ ಕುರುಂಜಿ, ತಿಲಕ ನವೀನ್ ಆರ್ತಾಜೆ, ಕೀರ್ತನ್ ಪೆರುಮುಂಡ, ಗೀತಾ ಆನಂದೇ ಗೌಡ ಉಪಸ್ಥಿತರಿದ್ದರು.










