
ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕಾನೂನು ಅರಿವು – ನೆರವು ಘಟಕ ಹಾಗೂ ಭಾರತೀಯ ಕಿಸಾನ್ ಸಂಘ ಎಣ್ಮುರು ವಲಯ ಇದರ ಸಹಯೋಗದಲ್ಲಿ ಯುವ ಮತ್ತು ಮಹಿಳಾ ಸಬಲೀಕರಣ ಹಾಗೂ ನಾಗರಿಕ ಶಿಷ್ಟಚಾರ ಅರಿವಿನ ಕಾರ್ಯಕ್ರಮ ನಿಂತಿಕಲ್ಲಿನ ಕಟ್ಟ ಚಂದ್ರಬಾಗಿ ಕಾಂತಪ್ಪ ಶೆಟ್ಟಿ ಸಭಾಭವನದಲ್ಲಿ ಸುಳ್ಯ ತಾಲೂಕು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎನ್.ಜಿ ಪ್ರಭಾಕರ ರೈಯವರ ಅದ್ಯಕ್ಷತೆಯಲ್ಲಿ ನ.15 ರಂದು ನಡೆಯಿತು.


ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಂ. ಜಿ ಸತ್ಯನಾರಾಯಣ ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮಾಡಿ ಬಲರಾಮನ ಭಾವಚಿತ್ರಕ್ಕೆ ಪುಷ್ಪರ್ಚಾನೆಗೈದರು.















ಪುತ್ತೂರು ವಿವೇಕಾನಂದ ಕಾನೂನ್ ಮಹಾ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ಹಾಗೂ ಪುತ್ತೂರಿನ ಖ್ಯಾತ ನ್ಯಾಯವಾದಿ ನಾಗೇಶ್ ಶರ್ಮ ರವರು ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ — ಆಕ್ರಮ ಸಕ್ರಮ, ಕುಮ್ಕಿ ಹಾಗೂ ಭೂ ಪರಿವರ್ತನೆ ಕಾನೂನುಗಳ ಮಾಹಿತಿ ಕಾರ್ಯಕ್ರಮ ನಡೆಸಿ ಕೊಟ್ಟರು.
ವೇದಿಕೆಯಲ್ಲಿ ವಲಯ ಕಿಸಾನ್ ಸಂಘದ ಅಧ್ಯಕ್ಷ ಶ್ರೀನಂದನ್ ಕೆ, ವಿವೇಕಾನಂದ ಕಾನೂನು ಮಹಾ ವಿದ್ಯಾಲಯದ ಸಹಾಯಕ ಪ್ರಾದ್ಯಾಪಕ ಲಕ್ಷ್ಮಿಕಾಂತ್ ಉಪಸ್ಥಿತರಿದ್ದರು. ತಾಲೂಕಿನಿಂದ ಕಿಸಾನ್ ಸಂಘದ ಸದಸ್ಯರು ಆಗಮಿಸಿದ್ದರು.

ತಂಡದ ಮೇಲ್ವಿಚಾರಕರಾದ ವೇಗನ್ ವರದ ಶಂಕರ್ ಕೆ, ಶರತ್ ಹಾಗೂ ಸದಸ್ಯರಾದ ಕು ಮಧುಶ್ರೀ, ಕು ದೇವಿಕಾ, ಕು ಹಿತಾ ಶ್ರೀ, ಸಹಕರಿಸಿದರು. ಕಾನೂನು ವಿದ್ಯಾರ್ಥಿ ಹಿತಾಶ್ರೀ ಪ್ರಾರ್ಥಿಸಿದರು.ಮಧುಶ್ರೀ ಕಾರ್ಯಕ್ರಮ ನಿರೂಪಣೆ ಮಾಡಿ, ಕು ದೇವಿಕಾ ಸ್ವಾಗತಿಸಿ, ವರದ ಶಂಕರ್ ವಂದಿಸಿದರು.
ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ










