ಬೆಳ್ಳಂಬೆಳಗ್ಗೆ ಸುಳ್ಯದಲ್ಲಿ ಮಾದಕ ದ್ರವ್ಯ ಸಹಿತ ಯುವಕನ ಬಂಧನ

0

ಗಾಂಧಿನಗರದ ನಾವೂರಿನಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿ

ಸುಳ್ಯದ ಗಾಂಧಿನಗರ ನಾವೂರು ಎಂಬಲ್ಲಿ ಇಂದು ಬೆಳಗ್ಗಿನ ಜಾವ ಓರ್ವ ಯುವಕನನ್ನು ಪೋಲಿಸರು ತಪಾಸಣೆ ನಡೆಸಿದಾಗ ಆತನಲ್ಲಿ ಮಾದಕ ದ್ರವ್ಯ ಪತ್ತೆಯಾದ ಘಟನೆ ವರದಿಯಾಗಿದೆ.
ಆರೋಪಿ ಶಾಫಿ ಎಂಬಾತ ಬೆಳಗ್ಗೆ ಗಂಟೆ 4. 00 ರ ಸಮಯಕ್ಕೆ ತನ್ನ ಬೈಕಿನಲ್ಲಿ ಗಾಂಧಿನಗರ ನಾವೂರು ರಸ್ತೆಯಲ್ಲಿ ಬರುತ್ತಿದ್ದಾಗ ಗಸ್ತು ತಿರುಗುತ್ತಿದ್ದ ಸುಳ್ಯ ಪೊಲೀಸರ ಕೈ ವಶನಾಗಿ ರುತ್ತಾನೆ. ಆತನಲ್ಲಿ ಸುಮಾರು 4 ಗ್ರಾಂ ನಷ್ಟು ಮಾದಕ ವಸ್ತು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.