ಸತ್ಯಶಾಂತಿ ತ್ಯಾಗಮೂರ್ತಿಯವರ ನೇತೃತ್ವದಲ್ಲಿ ಕಾಂಕ್ರೀಟ್-ಸಾರ್ವಜನಿಕರಿಂದ ಮೆಚ್ಚುಗೆ

ಸೋಣoಗೇರಿ ಸರ್ಕಲ್ ಬಳಿ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು ಸತ್ಯಶಾಂತಿ ತ್ಯಾಗಮೂರ್ತಿಯವರ ನೇತೃತ್ವದಲ್ಲಿ ಕಾಂಕ್ರೀಟೀಕರಣ ನ. 15 ರಂದು ರಾತ್ರಿ ನಡೆಯಿತು.
















ಈ ರಸ್ತೆಯಲ್ಲಿ ಕೆಲವು ತಿಂಗಳಿನಿಂದ ದೊಡ್ಡಗಾತ್ರದ ಹೊಂಡ ಗುಂಡಿಗಳು ಆಗಿದ್ದು, ಇದರಿಂದ ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಾರಿ ತೊಂದರೆ ಅನುಭವಿಸುತ್ತಿದ್ದರು. ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದರೂ ಯಾರು ಕೂಡಾ ಇದರತ್ತ ಗಮನಹರಿಸಿಲ್ಲ.
ಸತ್ಯಶಾಂತಿ ತ್ಯಾಗಮೂರ್ತಿಯವರು ಹಾಗೂ ಊರಿನವರು ಸೇರಿಕೊಂಡು ರಸ್ತೆಯನ್ನು ಕಾಂಕ್ರೀಟ್ ಕರಣಗೊಳಿಸಿದರು. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಯೋಗೀಶ ಕೆಳಗಿನಮನೆ, ಚಂದ್ರಶೇಖರ ಕುಕ್ಕಂದೂರು, ದೇವೇಂದ್ರ ಕುಕ್ಕಂದೂರು, ಸುಂದರರಾಜ್ ಸೋಣಂಗೇರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಕಾರ್ಯಕ್ಕೆ ಸಹಕಾರ ನೀಡಿದರು.










