ಜೂನಿಯರ್ ಕಾಲೇಜು ಮುಖ್ಯ ರಸ್ತೆ ಬಳಿ ಪೈಪ್ ಒಡೆದು ನೀರು ಪೋಲು

0

ಸುಳ್ಯದ ಜೂನಿಯರ್ ಕಾಲೇಜು ರಸ್ತೆಯ ತಾಲೂಕು ಪಂಚಾಯಿತಿ ಕಟ್ಟಡದ ಮುಂಭಾಗ ಮುಖ್ಯರಸ್ತೆಯಲ್ಲಿ ಕುಡಿಯುವ ನೀರಿನ ಮೈನ್ ಪೈಪ್ ಒಡೆದು ನೀರು ಬಾನೆತ್ತರಕ್ಕೆ ಚಿಮ್ಮಿದ ಘಟನೆ ನ. 21 ರಂದು ಇದೀಗ ನಡೆದಿದೆ.
ಏಕಾಏಕಿ ಪೈಪ್ ಒಡೆದು ನೀರು ಚಿಮ್ಮಲು ಆರಂಭಿಸಿದಾಗ ಸ್ಥಳೀಯ ಅಂಗಡಿ ಕಟ್ಟಡ ಮಾಲಕರು ಅದನ್ನು ತಡೆಯಲು ಕಲ್ಲು ಇನ್ನಿತರ ಸಾಮಗ್ರಿಗಳನ್ನು ಹಾಕಿ ಸದ್ಯಕ್ಕೆ ಚಿಮ್ಮುವುದನ್ನು ತಡೆದು ನಿಲ್ಲಿಸಿದ್ದಾರೆ.
ಇತ್ತೀಚಿಗೆ ಅಳವಡಿಸಿರುವ ನೀರಿನ ಪೈಪ್ ಹೊಡೆದಿರುವ ಕಾರಣ. ಜನರು ಕಾಮಗಾರಿಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.