ಕನಕಮಜಲು : ಕಾರು ಅಪಘಾತ – ಗಾಯ – ಆಸ್ಪತ್ರೆಗೆ ದಾಖಲು

0

ಕನಕಮಜಲು ಸಮೀಪ ಕನ್ನಡ್ಕ ಎಂಬಲ್ಲಿ ಕಾರೊಂದು ರಸ್ತೆ ಬದಿಯ ಮೋರಿಗೆ ಗುದ್ದಿ ಗಾಯಗೊಂಡ ಘಟನೆ ನ.21 ರಂದು ನಡೆದಿದೆ.
ಪುತ್ತೂರು ಕಡೆಯಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಗುದ್ದಿದ ಪರಿಣಾಮ ಕಾರಲ್ಲಿದ್ದವರಿಗೆ ಗಾಯವಾಗಿತ್ತು ಅವರನ್ನು ತಕ್ಷಣ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಮಂಡಕೋಲಿನ ಖಲೀಲ್ ಎಂಬವರ ಕಾರು ಎಂದು ತಿಳಿದು ಬಂದಿದೆ.