
ಆಲೆಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ನೆನಪಿಗಾಗಿ ಎಂ. ಆರ್. ಪಿ ಎಲ್ ರವರ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನ. 21 ರಂದು ನೆರವೇರಿಸಲಾಯಿತು.
ಪುರೋಹಿತ ಶಿವಪ್ರಸಾದ್ ಕೆದಿಲಾಯ ರವರು ಧಾರ್ಮಿಕ ಕಾರ್ಯ ನೆರವೇರಿಸಿದರು.
















ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಮುಖ್ಯ ಶಿಕ್ಷಕಿ ಸುನಂದ ಜಿ, ಅಲೆಟ್ಟಿ ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಎಸ್ ಡಿ ಎಂ ಸಿ ಅಧ್ಯಕ್ಷ ಬಾಲಚಂದ್ರ ಏಣಾವರ,
ಗಿರೀಶ್ ನಾರ್ಕೋಡು, ರಾಮಚಂದ್ರ ಅಲೆಟ್ಟಿ, ಚಂದ್ರಕಾಂತ್ ನಾರ್ಕೋಡು, ಪ್ರವೀಣ್ ಕಲ್ಲೆಂಬಿ, ರಾಕೇಶ್ ಕುಡೆಕಲ್ಲು, ಮೋಹನ ಎ. ಕೆ ಹಾಗೂ ಶಾಲೆಯ ಅದ್ಯಾಪಕ ವೃಂದದವರು,ಪೋಷಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.










