
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಕುಮಾರ ಪರ್ವತ ಯಾತ್ರೆ ಹಾಗೂ ಕುಮಾರ ಪಾದಕ್ಕೆ ಪೂಜೆ ಪೂರ್ವಶಿಷ್ಠ ಸಂಪ್ರದಾಯದಂತೆ ಬಹುಳ ಷಷ್ಠಿಯ ದಿನವಾದ ಡಿ.10 ರಂದು ಜರುಗಿತು.









ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದಕ್ಕೆ ಮತ್ತು ಸಮೀಪದಲ್ಲಿರುವ ವಾಸುಕಿಗೆ ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರು ಪೂಜೆ ಮತ್ತು ಅಭಿµಕ ನೆರವೇರಿಸಿದರು. ಬಳಿಕ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಶ್ರೀಮತಿ ಸೌಮ್ಯ ಭರತ್, ಶ್ರೀಮತಿ ಪ್ರವೀಣ ರೈ ಮರುವಂಜ, ಮಾಸ್ಟರ್ ಪ್ಲಾನ್ ಸಮಿತಿಯ ಪವನ್ ಎಂ.ಡಿ ಸೇರಿದಂತೆ ನೂರಾರು ಸಂಖ್ಯೆ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.
ಭಕ್ತರ ಕೆಲ ತಂಡ ದೇವರ ಗದ್ದೆ ಮೂಲಕ ಕುಮಾರ ಪರ್ವತ ಯಾತ್ರೆ ಮಾಡಿದರೆ, ಇನ್ನೊಂದು ಭಾಗದಿಂದದಲೂ, ಕುಮಾರಪರ್ವತ ಯಾತ್ರೆ ಕೈಗೊಳ್ಳಲಾಯಿತು.



