ಮಯೂರಿ ಯುವತಿ ಮಂಡಲದ ಸದಸ್ಯರ ಮಾನವೀಯ ಕಾರ್ಯ
ಅಮರಪಡ್ನೂರಿನ ಚೊಕ್ಕಾಡಿ ಪೇಟೆಯಲ್ಲಿ ವಾಹನದಡಿಗೆ ಸಿಲುಕಿ ಸತ್ತ ಬೀದಿ ನಾಯಿಯನ್ನು ಹೊಂಡ ತೆಗೆದು ದಫನ ಕಾರ್ಯ ಮಾಡುವ ಮೂಲಕ ಸ್ಥಳೀಯ ಮಯೂರಿ ಯುವತಿ ಮಂಡಲದ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.









ಬೀದಿ ನಾಯಿಯೊಂದು
ರಸ್ತೆ ಬದಿಯಲ್ಲಿ ಸತ್ತು ಬಿದ್ದಿದ್ದರಿಂದ ಪರಿಸರದಲ್ಲಿ ದುರ್ವಾಸನೆಯಿಂದಾಗಿ ನಡೆದಾಡಲು ಅಸಹ್ಯವಾಗಿತ್ತು. ಇದನ್ನು ಮನಗಂಡ ಯುವತಿ ಮಂಡಲದ ಸದಸ್ಯರು ಸ್ವಚ್ಛತೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಗುಂಡಿ ತೆಗೆದು ನಾಯಿಯ ದಫನ ಕಾರ್ಯ ವನ್ನು ನಿರ್ವಹಿಸಿದ್ದಾರೆ.
ಗರುಡ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತೀಶ್ ಪಿಲಿಕಜೆ ಯವರು ಸಹಕರಿಸಿದರು. ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಿದ ಯುವತಿ ಮಂಡಲದವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.



