
ನ್ಯಾಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ರಿ.) ಇದರ ನೂತನವಾಗಿ ಪ್ರಾರಂಭವಾದ ಸುಳ್ಯ ಶಾಖೆಯ ಪದಗ್ರಹಣ ಕಾರ್ಯಕ್ರಮ ಕೆವಿಜಿ ಆಯುರ್ವೇದ ಫಾರ್ಮಾ ಹಾಗೂ ರಿಸರ್ಚ್ ಸೆಂಟರಿನ ಎಸಿ ಆಡಿಟೋರಿಯಂನಲ್ಲಿ ಡಿ. 14 ರಂದು ನಡೆಯಿತು.
ಕಾರ್ಯಕ್ರಮದ ಪದಗ್ರಹಣ ಅಧಿಕಾರಿ ಆಗಿ ಜಿಲ್ಲಾ ಆಯುಷ್ ಆಫೀಸರ್ ಡಾ. ಮೊಹಮ್ಮದ್ ಇಕ್ಬಾಲ್ ರವರು ಸರಕಾರಿ ಕಾರ್ಯಕ್ರಮ ಹಾಗೂ ಇನ್ನಿತೀರ ಎಲ್ಲಾ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಇಂತಹ ಅಸೋಸಿಯೇಷನ್ ಅತ್ಯಮೂಲ್ಯ ಎಂದು ತಿಳಿಸಿ ಪದಪ್ರಧಾನವನ್ನು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ರಿ. ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಇವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ, “ಅಲೋಪಥಿ ಹಾಗೂ ಆಯುಷ್ ವೈದ್ಯರುಗಳು ಒಂದೇ ಧ್ಯೇಯದೊಂದಿಗೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಲ್ಲಿ ಕಾರ್ಯ ವೈಖರಿಯನ್ನು ನಡೆಸೋಣ”ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಎನ್ ಐ ಎಂ ಎ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ. ಸಿದ್ದಪ್ಪ ಮಗರಿ, ಪ್ರಧಾನ ಕಾರ್ಯದರ್ಶಿ ಡಾ. ರಾಧಿಕಾ ಎ ಖಟವಟೆ, ಉಪಾಧ್ಯಕ್ಷ ಡಾ. ಅನಿತ್ ಕುಮಾರ್, ಮೈಸೂರು ವಿಭಾಗದ ಕಾರ್ಯದರ್ಶಿ ಡಾ. ಜಗದೀಶ್ ನಾಯಕ ಎಂ ಆರ್, ಕೊಡಗು ವಿಭಾಗದ ಅಧ್ಯಕ್ಷ ಡಾ. ರಾಜಾರಾಮ್ ಎ ಆರ್ ಇವರು ಉಪಸ್ಥಿತರಿದ್ದು ಸುಳ್ಯದಲ್ಲಿ 60 ಕ್ಕೂ ಅಧಿಕ ವೈದ್ಯರುಗಳನ್ನು ಒಳಗೊಂಡು ಶಾಖೆಯನ್ನು ರಚಿಸಿರುವ ಕುರಿತು ಪದಾಧಿಕಾರಿಗಳನ್ನು ಹಾಗೂ ಸರ್ವ ಸದಸ್ಯರುಗಳನ್ನು ಶ್ಲಾಘಿಸಿದರು.









ಸುಳ್ಯ ವಿಭಾಗದ ಗೌರವಾಧ್ಯಕ್ಷ ಡಾ. ಲೀಲಾಧರ್ ಡಿ.ವಿ. ಮಾತನಾಡಿ “ಇಂತಹ ಕಾರ್ಯಕ್ರಮವನ್ನು ನಡೆಸಲು ತಮ್ಮ ಗುರುಗಳು ಹಾಗೂ ಹಿರಿಯರುಗಳ ಆಶೀರ್ವಾದವು ಅತಿ ಅವಶ್ಯಕ” ಎಂದು ತಿಳಿಸಿ ಶುಭ ಹಾರೈಸಿದರು.
ಎನ್ ಐ ಎಂ ಎ ಸುಳ್ಯ ವಿಭಾಗದ ಅಧ್ಯಕ್ಷ ಡಾ. ಲಕ್ಷ್ಮೀಶ ಕೆ ಎಸ್ ರವರು ಮುಂದಿನ ದಿನಗಳಲ್ಲಿ ಸುಳ್ಯ ಎನ್ ಐ ಎಂ ಎ ವಿಭಾಗವು ಇನ್ನೂ ಎತ್ತರಕ್ಕೆ ಬೆಳೆಯುವಂತೆ ಪರಿಶ್ರಮಿಸುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸುಳ್ಯ ವಿಭಾಗದ ಸಂಚಾಲಕ ಡಾ. ವೆಂಕಟೇಶ್ ಎಂ ಉಪಸ್ಥಿತರಿದ್ದರು.
ಸುಳ್ಯ ವಿಭಾಗದ ಕೋಶಾಧಿಕಾರಿ ಡಾ. ವಿನಯ್ ಶಂಕರ್ ಭಾರಧ್ವಾಜ್ ಬಿ ಸ್ವಾಗತಿಸಿ, ಡಾ. ಹರ್ಷಿತಾ ಎಂ ಹಾಗೂ ಡಾ ಅನುಷಾ ಎಂ ನಿರೂಪಿಸಿ, ಡಾ. ಪ್ರಮೋದ ಪಿ ಎ ಪ್ರಾರ್ಥಿಸಿ, ಕಾರ್ಯದರ್ಶಿ ಡಾ. ನಿತೀಶ್ ಕೆ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಎನ್ ಐ ಎಂ ಎ ಸುಳ್ಯ ವಿಭಾಗದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.



