ಕೋಲ್ಚಾರು ನವಜ್ಯೋತಿ ಯುವಕ ಮಂಡಲ ವತಿಯಿಂದ ಪೈ0ಬೆಚ್ಚಾಲು ತೋಟಕೊಚ್ಚಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿ ಸುತ್ತಮುತ್ತ ಸ್ವಚ್ಛತೆ ಕಾರ್ಯಕ್ರಮ

0

ಆಲೆಟ್ಟಿ ಗ್ರಾಮದ ಕೊಲ್ಚಾರು ನವಜ್ಯೋತಿ ಯುವಕ ಮಂಡಲ ವತಿಯಿಂದ, ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಇದರ ಪಂಚ ಸಪ್ತತಿ ಕಾರ್ಯಕ್ರಮದ ಯೋಜನೆಯಂತೆ ಪೈ0ಬೆಚ್ಚಾಲು ಎಂಬಲ್ಲಿಂದ ತೋಟಕೊಚ್ಚಿ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿರುವ ಕಾಡು ಹೆರೆದು ಸಾರ್ವಜನಿಕರಿಗೆ ಉಪಯುಕ್ತ ಆಗುವ ರೀತಿಯಲ್ಲಿ ಸ್ವಚ್ಚತೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿ ಇದರ ಉಪಾಧ್ಯಕ್ಷರಾದ ದಯಾನಂದ ಪಾತಿಕಲ್ಲು, ನವಜ್ಯೋತಿ ಯುವಕ ಮಂಡಲ ಇದರ ಅಧ್ಯಕ್ಷರಾದ ಧರ್ಮಪಾಲ ಕೊಯ0ಗಾಜೆ, ಸದಸ್ಯರುಗಳಾದ ನಿಸಾರ್ ತೋಟಕೊಚ್ಚಿ, ಷರೀಫ್ ತೋಟಕೊಚ್ಚಿ, ಭಾತಿಶ ತೋಟಕೊಚ್ಚಿಮತ್ತಿತರರು ಉಪಸ್ಥಿತರಿದ್ದರು.