Home Uncategorized ಸುಬ್ರಹ್ಮಣ್ಯ: ವೃತ್ತಿಪರ ಚಪ್ಪಲಿ ಕಳ್ಳನ ವಶ

ಸುಬ್ರಹ್ಮಣ್ಯ: ವೃತ್ತಿಪರ ಚಪ್ಪಲಿ ಕಳ್ಳನ ವಶ

0

ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲು

ವೃತ್ತಿಪರ ಚಪ್ಪಲಿ ಕಳ್ಳನೊಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ಬಳಿ ಇಂದು ವರದಿಯಾಗಿದೆ.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ಚಪ್ಪಲಿ ಸ್ಟಾಂಡ್ ನಲ್ಲಿ ಸದಾ ಚಪ್ಪಲಿ ಕಳ್ಳತನವಾಗಿ ಅಲ್ಲಿ ಕರ್ತವ್ಯದಲ್ಲಿದ್ದ ನೌಕರರೊಂದಿಗೆ ಭಕ್ತರು ಜಗಳ ಮಾಡುವುದು ಮತ್ತಿತರ ಘಟನೆಗಳಾಗುತಿತ್ತೆನ್ನಲಾಗಿದೆ. ಚಪ್ಪಲಿ ಸ್ಟ್ಯಾಂಡ್ ಉಚಿತವಾದ ಕಾರಣ ಭಕ್ತರು ಅವರ ಚಪ್ಪಲಿಯನ್ನು ಅವರೇ ಸ್ಟ್ಯಾಂಡ್‌ನಲ್ಲಿ ಇಟ್ಟು ವಾಪಸ್ಸು ತೆಗೆದುಕೊಳ್ಳುವ ವ್ಯವಸ್ಥೆ ಇಲ್ಲಿತ್ತು. ಆದರೆ ಚಪ್ಪಲಿ ಇಲ್ಲಿಟ್ಟು ಹೋದರೆ ಕೆಲವರ ಚಪ್ಪಲಿ ಸ್ಟ್ಯಾಂಡ್‌ನಿಂದ ಕಾಣೆಯಾಗುತ್ತಿತ್ತು ಎಂದು ತಿಳಿದು ಬಂದಿದೆ.
ಅಪರಿಚಿತ ಯುವಕನೊಬ್ಬ ಸ್ಟ್ಯಾಂಡ್ ಒಳಗೆ ಸದಾ ಇರುವುದನ್ನು ಗಮನಿಸಿ ಅವನನ್ನು ಇಂದು ಹಿಡಿದು ವಿಚಾರಿಸಲಾಗಿದೆ. ಕದ್ದ ಚಪ್ಪಲಿ ಸಮೇತ ಯುವಕನನ್ನು ಹಿಡಿದು ಸುಬ್ರಹ್ಮಣ್ಯ ಪೋಲಿಸರಿಗೆ ಒಪ್ಪಿಸಲಾಗಿದೆ. ಇತನು ಬೆಲೆ ಬಾಳುವ ಚಪ್ಪಲಿ ಕಳ್ಳತನ ಮಾಡುತ್ತಿದ್ದ. ನೌಕರರು ಬೆಳಗ್ಗೆ ಕರ್ತವ್ಯಕ್ಕೆ ಬರುವ ಮುಂಚೆಯೇ ಸ್ಟ್ಯಾಂಡ್ ಗೆ ಬಂದು ಕಳ್ಳತನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ದೂರಿನಂತೆ ತನಿಖೆ ನಡೆಯುತ್ತಿರುವುದಾಗಿ ತಿಳಿದು ಬಂದಿದೆ.

NO COMMENTS

error: Content is protected !!
Breaking