ರಂಗಮನೆಯ ‘ಅಮ್ಮು ಅಕ್ಕ’ ಜಲಜಾಕ್ಷಿ ನಿಧನ

0

ರಂಗನಿರ್ದೇಶಕ ಜೀವನ್ ರಾಂ ಸುಳ್ಯ ಇವರ ಅಕ್ಕ ರಂಗಮನೆಯಲ್ಲಿ ವಾಸವಿದ್ದ ಕು| ಜಲಜಾಕ್ಷಿ ಫೆ. 24 ರಂದು ಬೆಳಗ್ಗೆ ನಿಧನ ಹೊಂದಿದರು.

ಅವರಿಗೆ 66 ವರ್ಷ ವಯಸ್ಸಾಗಿತ್ತು. ಜೀವನ್ ರ ತಾಯಿ ದಿ| ವನಜಾಕ್ಷಿ ಇವರ ಅಕ್ಕನ ಮಗಳಾಗಿರುವ ಜಲಜಾಕ್ಷಿಯವರು ಎರಡೂ ಕಣ್ಣುಗಳನ್ನು ಕಳಕೊಂಡಿದ್ದರೂ ದಿನನಿತ್ಯದ ಕೆಲಸಗಳನ್ನು ಮಾಡುತ್ತಾ ಬಹಳ ಲವಲವಿಕೆಯಿಂದ ಇದ್ದವರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ರಂಗಮನೆಗೆ ಬರುತ್ತಿದ್ದ ಎಲ್ಲರಿಗೂ ಅವರು ಪ್ರೀತಿಯ “ಅಮ್ಮು ಅಕ್ಕ” ಆಗಿದ್ದರು.