













ಕೆ.ವಿ.ಜಿ ಐ.ಟಿ.ಐ. ಸುಳ್ಯ ಇಲ್ಲಿ ಮಹಿಳಾ ಸಿಬ್ಬಂದಿಗಳಿಂದ ವಿಶ್ವಮಹಿಳಾ ದಿನಾಚರಣೆಯನ್ನು ಮಾರ್ಚ್ ೧೦ ರ೦ದು ಕೆ.ವಿ.ಜಿ ಐ.ಟಿ.ಐ. ಸುಳ್ಯ ದಲ್ಲಿ ಆಚರಿಸಲಾಯಿತು. ಸಮಾರ೦ಭದ ಅಧ್ಯಕ್ಷತೆಯನ್ನು ಕೆ.ವಿ.ಜಿ ಐ.ಟಿ.ಐ. ಉಪಪ್ರಾಂಶುಪಾಲೆಯಾದ ಶ್ರೀಮತಿ ಗುಣರತ್ನ ಕೆ.ಬಿ ಇವರು ವಹಿಸಿದ್ದರು, ಮುಖ್ಯ ಅತಿಥಿಯಾಗಿ ಪ್ರಾಂಶುಪಾಲರಾದ ಶ್ರೀ ದಿನೇಶ್ ಯಂ. ಪಿ ಹಾಗು ಕಾಲೇಜಿನ ಅಧ್ಯಾಪಕ ವೃಂದ ಮತ್ತು ಕಛೇರಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಶ್ರೀಮತಿ ಗುಣರತ್ನ ಕೆ.ಬಿ ಇವರನ್ನು ಮಹಿಳಾ ಸಿಬ್ಬಂದಿಗಳ ವತಿಯಿಂದ ಗೌರವಾರ್ಪಣೆ ನೀಡಲಾಯಿತು. ಕಾಲೇಜಿನ ಸಿಬ್ಬಂದಿಗಳಾದ ಹೇಮವೇಣುಗೋಪಾಲ್ ನಿರೂಪಣೆಯೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಮತಿ ನಳಿನಿ ಕೆ ಇವರು ಸ್ವಾಗತಿಸಿ, ಶ್ರೀಮತಿ ವೀಣಾ ಜಿ.ಜೆ ಧನ್ಯವಾದ ನೀಡಿದರು. ಕಾಲೇಜಿನ ಸಿಬ್ಬಂದಿಗಳಿಗೆ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.







