













ಖ್ಯಾತ ಕವಿ, ಸುಳ್ಯದ ಸುಬ್ರಾಯ ಚೊಕ್ಕಾಡಿಯವರಿಗೆ ಶಿವಮೊಗ್ಗದ ಕರ್ನಾಟಕ ಸಂಘವು, ಜೀವಮಾನ ಸಾಧನೆಗಾಗಿ ನೀಡುವ ” ಡಾ.ದ.ರಾ.ಬೇಂದ್ರೆ ಕಾವ್ಯ ಪ್ರಶಸ್ತಿ” ಘೋಷಿಸಿದೆ.
ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶೀಘ್ರವೇ ಏರ್ಪಡಿಸಲಾಗುವುದೆಂದು ಕರ್ನಾಟಕ ಸಂಘ ತಿಳಿಸಿದೆ.







