ಎ.10,11 : ಅಮೈ – ಕೊಡಿಯಾಲಬೈಲಿನಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಬೈಲುಕೋಲ

0

ಅಮೈ – ಕೊಡಿಯಾಲಬೈಲು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಸಮಿತಿ ವತಿಯಿಂದ 47 ನೇ ವಾರ್ಷಿಕ ಶ್ರೀ ವಿಷ್ಣುಮೂರ್ತಿ ದೈವದ ಬೈಲುಕೋಲವು ಎ.10 ಮತ್ತು ಎ.11 ರಂದು ನಡೆಯಲಿದೆ.
ಎ.10 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹವನ,ಸಂಜೆ ಗಂಟೆ 6.00 ಕ್ಕೆ ಊರವರ ಕೂಡುವಿಕೆ,ರಾತ್ರಿ ಗಂಟೆ 7.30 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್ ಗಂಟೆ 9.00 ಕ್ಕೆ ಕುಲ್ಚಾಟ ನಡೆಯಲಿದೆ.
ಎ.11 ರಂದು ಪ್ರಾತ:ಕಾಲ ಗಂಟೆ 6.30 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ ಪ್ರಸಾದ ವಿತರಣೆ ನಡೆಯಲಿದೆ.
ಭಜನೆ – ಸಾಂಸ್ಕೃತಿಕ ಸಂಭ್ರಮ
ಎ.10 ರಂದು ರಾತ್ರಿ ಗಂಟೆ 8.00 ರಿಂದ ಶ್ರೀ ವಿಷ್ಣು ಯುವಕ ಮಂಡಲ ಅಮೈ ಕೊಡಿಯಾಲಬೈಲು,ಶ್ರೀ ವರಲಕ್ಷ್ಮಿ ಯುವತಿ ಮಂಡಲ ಅಮೈ ಕೊಡಿಯಾಲಬೈಲು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 10.30 ರಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಡಿಯಾಲಬೈಲು,ಅಂಗನವಾಡಿ ಕೇಂದ್ರ ಕೊಡಿಯಾಲ ಬೈಲು ಹಾಗೂ ಸ್ಥಳೀಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.
ಬಳಿಕ ಸುಳ್ಯದ ಫ್ಯೂಶನ್ ಇನ್ ಸ್ಟಿಟ್ಯೂಟ್ ಆಫ್ ಡ್ಯಾನ್ಸ್ ಇವರಿಂದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.
ವಿನಾಯಕ ಮಿತ್ರ ಬಳಗ ಅಮೈ ಮಡಿಯಾರು ಇವರಿಂದ “ಜೀವನ ಒಂಜಿ ದೊಂಬರಾಟ” ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.