ದುಗ್ಗಲಡ್ಕ ಹಾಲು ಉತ್ಪಾದಕ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಜಲಜಾಕ್ಷಿ ಎನ್.ಜಿ. ಪುನರಾಯ್ಕೆ

0


ಉಪಾಧ್ಯಕ್ಷರಾಗಿ ಶೀಲಾವತಿ ಮಾಧವ

ದುಗ್ಗಲಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಎ.4 ರಂದು ನಡೆದು ಅಧ್ಯಕ್ಷರಾಗಿ ಶ್ರೀಮತಿ ಜಲಜಾಕ್ಷಿ ಎನ್‌‌.ಜಿ.ನೆಕ್ರಾಜೆ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಶೀಲಾವತಿ ಮಾಧವ ರವರು ಅವಿರೋಧವಾಗಿ ಆಯ್ಕೆಯಾದರು.


ನೂತನ ನಿರ್ದೇಶಕರುಗಳಾಗಿ ಶ್ರೀಮತಿ ಭಾರತಿ ಕೆ.ಎಸ್.ಮೂಡೆಕಲ್ಲು, ಶ್ರೀಮತಿ ಹೇಮಾವತಿ ಕೊಯಿಕುಳಿ, ಶ್ರೀಮತಿ ಉಷಾ ಪಿ.ಎಸ್‌.ಪಾನತ್ತಿಲ, ಶ್ರೀಮತಿ ಸರೋಜ ಡಿ.ದುಗ್ಗಲಡ್ಕ, ಶ್ರೀಮತಿ ಶ್ಯಾಮಲ ಮುಂಡೋಕಜೆ, ಶ್ರೀಮತಿ ಲತಾ.ಕೆ.ಕಂದಡ್ಕ, ಶ್ರೀಮತಿ ಸುಶ್ಮಿತಾ ಮುಂಡೋಕಜೆ, ಶ್ರೀಮತಿ ಕಮಲಾಕ್ಷಿ ಕುಂಬೆತ್ತಿಬನ ಆಯ್ಕೆಯಾಗಿದ್ದು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ರಿಟರ್ನಿಂಗ್ ಆಫೀಸರ್ ಶಿವಲಿಂಗಯ್ಯ ಅಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಕಾರ್ಯದರ್ಶಿ ಶ್ರೀಮತಿ ಪ್ರಿಯಾ ಹಾಗೂ ಸಿಬ್ಬಂದಿಗಳು ಸಹಕರಿಸಿದರು.