













ಎ. 3-4 ರಂದು ಪುಣ್ಚತ್ತಾರಿನ ಕರಿಮಜಲಿನಲ್ಲಿ ನಡೆದ 57ನೇ ವರ್ಷದ ಒತ್ತೆಕೋಲದ ಖರ್ಚು ವೆಚ್ಚಗಳ ಸಭೆ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ರವರ ಅಧ್ಯಕ್ಷತೆಯಲ್ಲಿ ಎ. 12ರಂದು ನಡೆಯಿತು. ಒತ್ತೆಕೋಲದ ಆದಾಯ ಖರ್ಚು ವೆಚ್ಚಗಳ ವಿವರಗಳನ್ನು ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ ಸಭೆಗೆ ವಿವರಿಸುತ್ತಾ ಈ ವರ್ಷದ ಒಟ್ಟು ಆದಾಯ ರೂ. 6.66 ಲಕ್ಷ, ಒಟ್ಟು ಖರ್ಚು ರೂ. 5.38 ಲಕ್ಷ ಮತ್ತು ರೂ. 1.28 ಲಕ್ಷ ಉಳಿಕೆಯಾಗಿರುವುದಾಗಿ ತಿಳಿಸಿದರು. ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತೂರ್ ಸ್ವಾಗತಿಸಿ, ಒತ್ತೆಕೋಲದ ಯಶಸ್ಸಿಗೆ ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಿ, ವಂದಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಶೇಷಪ್ಪ ಗೌಡ ಬೆದ್ರಂಗಳ, ಮೊಕ್ತೇಸರರಾದ ವೆಂಕಟ್ರಮಣ ಆಚಾರ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.







