ನೃತ್ಯಬಲಿಯನ್ನು ಕಣ್ತುಂಬಿಕೊಂಡು ಭಾವಪರವಶರಾದ ಭಕ್ತಾದಿಗಳು
ಎ.೧೧ ಮತ್ತು ಎ.೧೨ರಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಜಾತ್ರೆಯು ಬ್ರಹ್ಮಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಎ.೧೧ರಂದು ಉಗ್ರಾಣ ತುಂಬಿಸಿ ಪರಿವಾರ ದೈವಗಳ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಸಂಜೆ ತಂತ್ರಿಗಳ ಆಗಮನ, ದೇವತಾ ಪ್ರಾರ್ಥನೆ, ಪಶುದಾನ ಪುಣ್ಯಾಹ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ರಂಗ ಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.














ಎ.೧೧ರಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದೂಷಿ ಪ್ರೇಮಾಂಜಲಿ ಆಚಾರ್ಯ ತಂಡದವರಿಂದ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವಿರಾಜಪೇಟೆಯವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಅಪರಾಹ್ನ ಗಂಟೆ ೩.೦೦ರಿಂದ ಪಂಚಾನನ ಭಜನಾ ತಂಡ ಕೊಟಗು ಸಂಪಾಜೆ, ಪಂಚಾಕ್ಷರಿ ಭಜನಾ ತಂಡ, ಮಹಾಗಣಪತಿ ಭಜನಾ ತಂಡ ಕೊಯಿನಾಡು, ಮಲ್ಲಿಕಾ ಭಜನಾ ತಂಡ ಪೂಜಾರಿ ಮನೆ ಅರಂತೋಡು, ಜೈ ಭಜರಂಗಿ ಭಜನಾ ತಂಡ ಕೊಡಗು, ಸಂಪಾಜೆ, ಜೈ ಗುರುಜಿ ಭಜನಾ ತಂಡ ದ.ಕ. ಸಂಪಾಜೆ, ಚಾಮುಂಡೇಶ್ವರಿ ಭಜನಾ ತಂಡ ದೇವರಕೊಲ್ಲಿ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ರಾತ್ರಿ ನಟರಾಜ ನೃತ್ಯ ನಿಕೇತನ (ರಿ.)ಕಲ್ಲುಗುಂಡಿ, ಅರಂತೋಡು, ಸುಳ್ಯ ಶಾಖೆಯ ವಿದೂಷಿ ಇಂದುಮತಿ ನಾಗೇಶ್ ಶಿಷ್ಯ ವೃಂದದವರಿಂದ ಭರತನಾಟ್ಯ ವೈಭವ ಕಾರ್ಯಕ್ರಮ ನಡೆಯಿತು. ಆದರ್ಶ ಮಹಿಳಾ ತಂಡ ಚಡಾವು ಇವರಿಂದ ಕರಗ ನೃತ್ಯ, ರತ್ನಶ್ರೀ ಜ್ಞಾನವಿಕಾಸ ಮಹಿಳಾ ಸದಸ್ಯರಿಂದ ಕೊಯಿನಾಡು ತಂಡದವರಿಂದ ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು.
ಎ.೧೨ರಂದು ಬೆಳಿಗ್ಗೆ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ, ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮಹಾ ಅನ್ನಸಂತರ್ಪಣೆ, ದೀಪಾರಾಧನೆ, ಹವಿಸು ಪೂಜೆ, ಭೂತ ಬಲಿ, ಶ್ರೀ ದೇವರ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ಶ್ರೀಮತಿ ಸವಿತಾ ಕಿರಣ್ ನೃತ್ಯ ಶಿಕ್ಷಕಿ ಸಂಪಾಜೆ ಇವರಿಂದ ನೃತ್ಯ ವೈವಿಧ್ಯ, ಕುಣಿತ ಭಜನಾ ಕಲಾ ತಂಡ ಸಂಪಾಜೆ ಇವರಿಂದ ಕುಣಿತ ಭಜನೆ, ಆಧ್ಯಾ ಮತ್ತು ಆರಾಧ್ಯ ಚೌಟಾಜೆ ಅಂಬ್ರೋಟಿ ಇವರಿಂದ ಭರತನಾಟ್ಯ, ಮಹಾವಿಷ್ಣು ಮಹಿಳಾ ಭಜನಾ ತಂಡ ಆನ್ಯಾಳ ಚೆಂಬು, ಯುವ ಕೇಸರಿ ಯುವಕ ಮಂಡಲ ಭಜನಾ ತಂಡ ಬಾಲೆಂಬಿ, ಶ್ರೀ ದೇವಿ ಭಜನಾ ಮಂಡಲಿ ಕುದ್ರೆಪಾಯ, ಶ್ರೀ ವಿಷ್ಣು ಮಹಿಳಾ ಭಜನಾ ಮಂಡಲಿ ದ.ಕ. ಸಂಪಾಜೆ, ಶ್ರೀ ದೇವಿ ಭಜನಾ ಮಂಡಲಿ ದಬ್ಬಡ್ಕ ಕಾಂತಬೈಲು, ಶ್ರೀ ಮಂಜುನಾತ ಭಜನಾ ಮಂಡಲಿ ಬಾಲೆಂಬಿ, ವಿವೇಕಾನಂದ ಯುವಕ ಮಂಡಲ ಭಜನಾ ತಂಡ ದೇವಾಲಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಾಹಿತ್ಯ ಸಂಗೀತ ಕಲಾ ಕೇಂದ್ರ ಆರತಿ ಬಳಗದವರಿಂದ ಭಕ್ತಿ ಭಾವ ಜಾನಪದ ಸಂಗೀತ, ದಯಾಮಣಿ ಹೇಮಂತ್ ಸಂಪಾಜೆ ಇವರಿಂದ ಭಕ್ತಿ ಸುಧಾ ಕಾರ್ಯಕ್ರಮ, ಮಂದಾರ ಕಲಾವಿದ ತಂಡ ಉಜಿರೆ ಇವರಿಂದ ಅಜ್ಜಿಗು ಏರ್ಲ ಇಜ್ಜಿ ನಾಟಕ ನಡೆಯಿತು.
ಈ ಸಂದರ್ಭದಲ್ಲಿ ಮೋಕ್ತೇಸರರಾದ ಎಂ.ಬಿ.ಸದಾಶಿವ, ಗೌರವ ಅಧ್ಯಕ್ಷ ರಾಜರಾಮ ಕೀಲಾರು, ಅಧ್ಯಕ್ಷರಾದ ಜಯಕುಮಾರ್ ಚೆದ್ಕಾರ್, ಕಾರ್ಯದರ್ಶಿ ಕೇಶವ ಚೌಟಾಜೆ, ಅರ್ಚಕರಾದ ಶಂಕರ ಹೆಬ್ಬಾರ್, ಸತ್ಯನಾರಾಯಣ ಭಟ್, ಪವಿತ್ರ ಪಾಣಿ, ಗೌರವ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಆಡಳಿತ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಂಪಾಜೆ, ಕೊಡಗು, ಊರ ಹಾಗೂ ಪರವೂರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.







