ಅಸೌಖ್ಯದಿಂದಿರುವ ಯುವಕನ ಚಿಕಿತ್ಸೆಗೆ ಮಂಡೆಕೋಲು ಜಾಗೃತ ಜಾಗರಣ ನೆರವು – ಮನವಿ

0

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಸತೀಶ್ ಮರ್ಕಂಜರವರು ಅನಾರೋಗ್ಯ ದಿಂದ ಬಳಲುತಿದ್ದು, ಇವರ ಚಿಕಿತ್ಸೆಗೆ ದೊಡ್ಡ ಮೊತ್ತದ ಆರ್ಥಿಕ ನೆರವು ಬೇಕಾಗಿದ್ದು, ಜಾಗೃತ ಜಾಗರಣ ಮಂಡೆಕೋಲು ಸಂಘಟನೆ ಮುಖಾಂತರ ದಾನಿಗಳ ಸಹಕಾರದಿಂದ ನೆರವು ಯಾಚಿಸುತ್ತಿದೆ.

ಈ ಸಂಘಟನೆಯ ಮೂಲಕ ಯುವಕನ ಚಿಕಿತ್ಸೆಗೆ ನೆರವು ಸಂಗ್ರಹ ಮಾಡುತ್ತಿದ್ದು, ಸಂಘಟನೆಯ ಮುಖಾಂತರ ಮಾಡುವ ಈ ಸೇವಾನಿಧಿ ಮೇ.23ರಂದು ಸಂಜೆ 6.00 ಗಂಟೆಗೆ ಕೊನೆಗೂಳಿಸಲಿದ್ದು, ಸೇವಾನಿಧಿ ನೀಡ ಬಯಸುವವರು ಇಂದು ಸಂಜೆ ಒಳಗಾಗಿ ನೀಡಬೇಕಾಗಿ ಮನವಿ ಮಾಡಿದ್ದಾರೆ. ಆ ನಂತರದಲ್ಲಿ ನೆರವು ನೀಡ ಬಯಸುವವರು ನೇರವಾಗಿ ಸತೀಶರ ಖಾತೆಗೆ ಹಾಕಬಹುದಾಗಿದೆ.

ನೆರವು ನೀಡುವವರು ಜಾಗೃತ ಜಾಗರಣ ಮಂಡೆಕೋಲು
ಸಂಪರ್ಕ : 94495 93139 ಇವರನ್ನು ಸಂಪರ್ಕಿಸಬಹುದು ಎಂದು ನೆರವು ಸಂಗ್ರಹದಲ್ಲಿ ತೊಡಗಿರುವ ಬಾಲಚಂದ್ರ ದೇವರಗುಂಡ ಹಾಗೂ ಮಹೇಶ್ ಉಗ್ರಾಣಿಮನೆ ವಿನಂತಿಸಿದ್ದಾರೆ. ಸಂಗ್ರಹವಾದ ಮೊತ್ತವನ್ನು ಮೇ.25ರಂದು ಸತೀಶರಿಗೆ ಹಸ್ತಾಂತರ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.