ಡಾ.ರೇಣುಕಾಪ್ರಸಾದ್ ಮತ್ತು ಮನೆಯವರು ಕೊಡುಗೆ ನೀಡಿದ ವಧುವರರ ಗೃಹದ ಲೋಕಾರ್ಪಣೆ
50 ವರ್ಷ ದಾಂಪತ್ಯ ನಡೆಸಿದವರಿಗೆ ಗೌರವ – ಶೈಕ್ಷಣಿಕ ಸಾಧಕರಿಗೆ ಅಭಿನಂದನೆ

ಸುಳ್ಯದ ಗೌಡರ ಯುವ ಸೇವಾ ಸಂಘ, ಗೌಡ ಸಮುದಾಯ ಭವನ ನಿರ್ವಹಣಾ ಸಮಿತಿ ಮತ್ತು ಮಹಿಳಾ ಘಟಕ, ತರುಣ ಘಟಕ, ನಗರ ಹಾಗೂ ಗ್ರಾಮ ಸಮಿತಿಗಳ ಆಶ್ರಯದಲ್ಲಿ ಶ್ರೀ ಲಕ್ಷ್ಮೀಸಹಿತ ಸತ್ಯನಾರಾಯಣ ದೇವರ ಪೂಜೆ ಹಾಗೂ ಡಾ. ರೇಣುಕಾಪ್ರಸಾದ್ ಕೆ.ವಿ. ಮತ್ತು ಮನೆಯವರು ಕೊಡುಗೆ ನೀಡಿದ ವಧು ವರರ ನವೀಕೃತ ಗೃಹದ ಲೋಕಾರ್ಪಣೆ, ಸಹಕಾರಿ ರತ್ನ ಪಿ.ಸಿ.ಜಯರಾಮರಿಗೆ ಸನ್ಮಾನ, 50 ವರ್ಷ ದಾಂಪತ್ಯ ಜೀವನ ಮುನ್ನಡೆಸಿದ ದಂಪತಿಗಳಿಗೆ ಗೌರವಾರ್ಪಣೆ, ಶೈಕ್ಷಣಿಕ ಸಾಧಕರಿಗೆ ಅಭಿನಂದನಾ ಸಮಾರಂಭ ಮೇ.23ರಂದು ಕೊಡಿಯಾಲಬೈಲಿನ ಗೌಡ ಸಮುದಾಯಭವನದಲ್ಲಿ ನಡೆಯಿತು.















ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವದುವರರ ಗೃಹವನ್ನು ಮಾಜಿ ಸಚಿವ ಜಿ.ಟಿ. ದೇವೇಗೌಡರ ಜತೆಗೂಡಿ ಡಾ.ರೇಣುಕಾಪ್ರಸಾದ್ ಹಾಗೂ ಡಾ.ಜ್ಯೋತಿ ಆರ್.ಪ್ರಸಾದ್ ಲೋಕಾರ್ಪಣೆಗೊಳಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಜಿ.ಟಿ.ದೇವೇಗೌಡರು ಉದ್ಘಾಟಿಸಿ ಮಾತನಾಡಿದರು.

ಸನ್ಮಾನ : ಸಮಾರಂಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಪಿ.ಸಿ.ಜಯರಾಮ – ಶ್ರೀಮತಿ ಉಷಾ ಜಯರಾಂರನ್ನು ಸನ್ಮಾನಿಸಲಾಯಿತು. ಹಾಗೂ ಜಿ.ಟಿ.ದೇವೇಗೌಡ, ಡಾ.ರೇಣುಕಾಪ್ರಸಾದ್ ದಂಪತಿಗಳನ್ನು, ಕ್ಯಾಂಪ್ಕೋ ನಿರ್ದೇಶಕ ಎ.ವಿ.ತೀರ್ಥರಾಮ, ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಮುಗುಪ್ಪು ಕೂಸಪ್ಪ ಗೌಡ, ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತಮ ಫಲಿತಾಂಶ ಪಡೆದ ಎಂ.ಜಿ.ಎಂ.ಶಾಲಾ ಪರವಾಗಿ ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಗೌಡರ ಯುವ ಸೇವಾ ಸಂಘದ ಕೋಶಾಧಿಕಾರಿ ದಿನೇಶ್ ಮಡ್ತಿಲ, ಉಪಾಧ್ಯಕ್ಷ ವಸಂತ ಕಿರಿಭಾಗರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ 8 ನೇ ರ್ಯಾಂಕ್ ಪಡೆದ ಎಂ.ಜಿ.ಎಂ. ಶಾಲೆಯ ವಿದ್ಯಾರ್ಥಿನಿ ರಿಶಿತಾ ಪಿ.ಬಿ., ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ, ಸಹ ಶಿಕ್ಷಕಿ ಚಿತ್ರಲೇಖ, ಹಾಗೂ 100 ಫಲಿತಾಂಶ ಬರಲು ಕಾರಣರಾದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಶುಭಹಾರೈಸಿದರು.

ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ವಿನುತಾ ಪಾತಿಕಲ್ಲು, ತರುಣ ಘಟಕದ ಅಧ್ಯಕ್ಷ ಪ್ರೀತಮ್ ಡಿ.ಕೆ., ಸುಳ್ಯದ ವೆಂಕಟರಮಣ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ, ನಗರ ಘಟಕದ ಅಧ್ಯಕ್ಷ ರಾಕೇಶ್ ಕುಂಟಿಕಾನ, ಪ್ರವೀಣ್ ಕುಮಾರ್ ಮೈಸೂರು ವೇದಿಕೆಯಲ್ಲಿದ್ದರು.

ನ್ಯಾಯವಾದಿ ಸುಮಾ ಬಾಲಚಂದ್ರ ಪ್ರಾರ್ಥಿಸಿದರು. ಕಾರ್ಯಕ್ರಮ ನಿರ್ದೇಶಕ ಜಯರಾಮ ದೇರಪ್ಪಜ್ಜನಮನೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ನಿವೃತ್ತ ಶಿಕ್ಷಕಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು.



















