













ಧರ್ಮಸ್ಥಳಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ವಲಯದ ಆಶ್ರಯದಲ್ಲಿ ಮೇ.4 ರಿಂದ 11 ರ ತನಕ ನಡೆದ ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರದ ಲೆಕ್ಕ ಪತ್ರ ಮಂಡನಾ ಸಭೆಯು
ಮೆ.22 ರಂದು ಸುಳ್ಯ
ಯೋಜನಾಧಿಕಾರಿ ಕಚೇರಿಯ ಸಭಾಭವನದಲ್ಲಿ ನಡೆಯಿತು.

ಸುಳ್ಯ ವಲಯದ ಅಧ್ಯಕ್ಷೆ ಶ್ರೀಮತಿ ಸವಿತಾ ಸಂದೇಶ್ ರವರು ಅಯ ವ್ಯಯದ ಕುರಿತು ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳ ವಿವರ ನೀಡಿದರು.
ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿಅಭಿನಂದಿಸಿದರು.
ಯೋಜನೆಯಮೇಲ್ವಿಚಾರಕ ದಿನೇಶ್, ಸೇವಾ ಪ್ರತಿನಿಧಿ ಶ್ರೀಮತಿ ಸೌಮ್ಯ,ಶ್ರೀಮತಿ ಭಾರತಿ ಜಟ್ಟಿಪಳ್ಳ, ಶ್ರೀಮತಿ ಜ್ಯೋತಿ ಜಯನಗರ ಹಾಗೂ ಪರಿಷತ್ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.







